‘ಧರ್ಮಸ್ಥಳ ಯೋಜನೆಯಿಂದ ಸ್ವಾವಲಂಬನೆ’

7

‘ಧರ್ಮಸ್ಥಳ ಯೋಜನೆಯಿಂದ ಸ್ವಾವಲಂಬನೆ’

Published:
Updated:

ಬಂಟ್ವಾಳ: ‘ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದ ಚಿಂತನೆಯಿಂದ 30 ವರ್ಷಗಳ ಹಿಂದೆ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನದ ಜೊತೆಗೆ ಕೃಷಿ, ಹೈನುಗಾರಿಕೆ, ಸ್ವಂತ ಉದ್ಯೋಗ ಹೀಗೆ ಮಹಿಳೆಯರು ಮತ್ತು ವಯೋವೃದ್ಧರಲ್ಲಿಯೂ ಆರ್ಥಿಕ ಸ್ವಾವಲಂಬನೆ ಮೂಡಿಸಲು ಸಾಧ್ಯವಾಗಿದೆ’ ಎಂದು ಪ್ರಗತಿಪರ ಕೃಷಿಕ ಜಗದೀಶ ಆಳ್ವ ಅಗ್ಗೊಂಡೆ ಹೇಳಿದ್ದಾರೆ.ತಾಲ್ಲೂಕಿನ ಅರಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ನಡೆದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಿದ್ಧಕಟ್ಟೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಅರ್ಕಕೀರ್ತಿ ಇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಜನೆ ಲೆಕ್ಕಪರಿಶೋಧಕ ಯೋಗೀಶ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸಂಜೀವ ನಾಯ್ಕ್, ಒಕ್ಕೂಟ ವಲಯಾಧ್ಯಕ್ಷ ರಾಜೇಶ ಗೌಡ ಪಂಜಿಕಲ್ಲು, ಜನಜಾಗೃತಿ ವೇದಿಕೆ ಸದಸ್ಯ ಜಗದೀಶ ಕೊಯಿಲ ಮತ್ತಿತರರು ಶುಭ ಹಾರೈಸಿದರು.ರಾಯಿ, -ಕೊಯಿಲ,- ಅರಳ ಸ್ವಸಹಾಯ ಸಂಘಗಳ ನಿಕಟಪೂರ್ವ ಅಧ್ಯಕ್ಷರಾದ ಉಷಾ ಪೂಜಾರಿ, ಆನಂದ ಬುರಾಲ್, ಜಗದೀಶ ಶೆಟ್ಟಿ, ಚೆನ್ನಪ್ಪ ಪೂಜಾರಿ ಇವರು ಕ್ರಮವಾಗಿ ಲಿಂಗಪ್ಪ ಸಪಲ್ಯ, ಚಂದಪ್ಪ ಮೂಲ್ಯ, ಸರಸ್ವತಿ ಮತ್ತು ಗಿರಿಜಾ ಇವರಿಗೆ ಪದಗ್ರಹಣ ಮೂಲಕ ಸಂಘದ ಜವಾಬ್ದಾರಿ ವಹಿಸಿ ಕೊಟ್ಟರು.ಸಂಘದ ಸದಸ್ಯ ರಾಘವೇಂದ್ರ ಭಟ್ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಆನಂದ ಬುರಾಲ್ ವಂದಿಸಿ­ದರು. ಮೋಹಿಣಿ ವರದಿ ವಾಚಿಸಿ, ಮಲ್ವಿಚಾರಕ ವಿನಾಯಕ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry