ಮಂಗಳವಾರ, ಜನವರಿ 28, 2020
18 °C

‘ಧೂಮ್‌ 3’ ದಾಖಲೆ ಗಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ‘ಧೂಮ್‌ 3’ ಚಿತ್ರದ ಮೊದಲ ಎರಡು ದಿನದ ಗಳಿಕೆ ರೂ69.58 ಕೋಟಿ! ತಮಿಳು ಹಾಗೂ ತೆಲುಗು ಅವತರಣಿಕೆಯ ಗಳಿಕೆಯೂ ಈ ಲೆಕ್ಕದಲ್ಲಿ ಸೇರಿಕೊಂಡಿದೆ.ವಿಜಯ್‌ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರ ಧೂಮ್‌ ಸರಣಿ ಚಿತ್ರಗಳಲ್ಲೇ ಇದು ವಿಭಿನ್ನವಾದುದು. ಮೊದಲೆರಡು ಚಿತ್ರಗಳಿಗಿಂತ ಗಟ್ಟಿ ಕಥಾನಕವುಳ್ಳ ‘ಧೂಮ್‌ 3’ ಚಿತ್ರ ಈಗ ಗಲ್ಲಾಪೆಟ್ಟಿಗೆ ದೋಚುತ್ತಿದೆ. ಶುಕ್ರವಾರ ತೆರೆಕಂಡ ಈ ಚಿತ್ರದ ಮೊದಲ ದಿನದ ಗಳಿಕೆ ರೂ36.22 ಕೋಟಿಯಾದರೆ, ಶನಿವಾರದ ಗಳಿಕೆ ರೂ33.36 ಕೋಟಿಯಾಗಿತ್ತು.ಅಂದಹಾಗೆ, ಮೊದಲೆರಡು ಚಿತ್ರಗಳಂತೆ ಈ ಚಿತ್ರದಲ್ಲೂ ಸಹ ಅಭಿಷೇಕ್‌ ಬಚ್ಚನ್‌ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದರೆ, ಉದಯ್‌ ಚೋಪ್ರಾ ತಮ್ಮ ಎಂದಿನ ಹಳಸಲು ಕಾಮಿಡಿಯನ್ನು ಇಲ್ಲೂ ಮುಂದುವರಿಸಿದ್ದಾರೆ. ‘ಧೂಮ್‌ 3’ ಚಿತ್ರಕ್ಕೆ ಆಮೀರ್‌ ಜೀವ ತುಂಬಿದ್ದರೆ, ನಟಿ ಕತ್ರೀನಾ ಕೈಫ್‌ ಗ್ಲಾಮರ್‌ ತುಂಬಿದ್ದಾರೆ. 

ಪ್ರತಿಕ್ರಿಯಿಸಿ (+)