ಮಂಗಳವಾರ, ಜನವರಿ 21, 2020
28 °C

‘ಧ್ರುವ’ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಎಲ್‌ನ ‘ಧ್ರುವ’ ಹೆಲಿಕಾಪ್ಟರ್‌ನ್ನು ಮಾಲ್ಡೀವ್ಸ್‌ ದೇಶದ ರಕ್ಷಣಾ ಪಡೆಗಳಿಗೆ ಶನಿವಾರ ಹಸ್ತಾಂತರ ಮಾಡಲಾಯಿತು.ಕೊಚ್ಚಿಯ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್‌ ರಕ್ಷಣಾ ಸಚಿವ ಮೊಹಮದ್‌ ನಜೀಮ್‌ ಅವರಿಗೆ ಹೆಲಿಕಾಪ್ಟರ್‌ನ್ನು ಸಾಂಕೇತಿಕ­ವಾಗಿ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಜೀಮ್‌ ಅವರು ‘ಭಾರತದಿಂದ ಸಿಕ್ಕ ಅಮೂಲ್ಯವಾದ ಕೊಡುಗೆ ಇದು’ ಎಂದು ಬಣ್ಣಿಸಿದರು.ಎಚ್‌.ಎ.ಎಲ್‌ ಅಧ್ಯಕ್ಷ ಡಾ.ಆರ್‌.ಕೆ.­ತ್ಯಾಗಿ, ‘ಧ್ರುವ ಹೆಲಿಕಾಪ್ಟರ್‌ ಅನ್ನು ಮಾಲ್ಡೀವ್ಸ್‌ಗೆ ಹಸ್ತಾಂತರ ಮಾಡಿದ್ದು ಹೆಮ್ಮೆಯ ವಿಷಯ. ಹೊಸ ವರ್ಷದ ಆರಂಭದಲ್ಲಿ ಅದು ಮಾಲ್ಡೀವ್ಸ್‌ ತಲುಪಲಿದೆ’ ಎಂದರು.ರಕ್ಷಣಾತ್ಮಕ ಕಾರ್ಯಗಳು ಸೇರಿ­ದಂತೆ ನಾಗರಿಕ ಉದ್ದೇಶಗಳಿಗೂ ಈ ಹೆಲಿಕಾಪ್ಟರ್‌ ಅನ್ನು ಬಳಸ­ಬಹುದು. ವಿಕೋಪ ಸಂಭವಿಸಿದಾಗ ಇದು ಅತ್ಯುತ್ತಮ ಸೇವೆ ನೀಡಿದೆ ಎಂದರು.

ಪ್ರತಿಕ್ರಿಯಿಸಿ (+)