ಗುರುವಾರ , ಜನವರಿ 23, 2020
22 °C

‘ನಗರಾಡಳಿತ ಸಂಸ್ಥೆಗಳ ನಡುವೆ ಸಮನ್ವಯ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮಕಾಲೀನ ಸಂಗತಿ­ಗಳನ್ನು ಒಳಗೊಳ್ಳದ ನಾಗರಿಕತೆ ಮತ್ತು ನಗರಗಳು ಕಾಲಕ್ರಮೇಣ ಕಣ್ಮರೆ­ಯಾ­ಗುತ್ತವೆ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಾಚಾರಿ ಹೇಳಿದರು.ಸುಸ್ಥಿರ ಅಭಿವೃದ್ಧಿ ಕೇಂದ್ರವು (ಸೆಂಟರ್ ಫಾರ್‌ ಸಸ್ಟೇನೆಬಲ್ ಡೆವ­ಲಪ್‌­ಮೆಂಟ್– ಸಿಎಸ್‌ಡಿ) ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ‘ಭವಿಷ್ಯದ ನಗರಗಳು’ ಕುರಿತ ಕಾರ್ಯಾ­ಗಾರದಲ್ಲಿ  ‘ಸ್ಮಾರ್ಟ್ ಸಿಟಿ ಕೌನ್ಸಿಲ್‌ – ಇಂಡಿಯಾ’ದ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹರಪ್ಪ ಮತ್ತು ಮೆಹೆಂಜಾದಾರೋ  ಇಂದಿಗೂ ಉತ್ತಮ ವಿನ್ಯಾಸದ ನಗರಗಳೇ ಆಗಿವೆ. ಆದರೆ ಸ್ಥಗಿತಗೊಂಡ ಅಭಿವೃದ್ಧಿಯಿಂದ ಅವು ನಾಶವಾಗಿರ­ಬೇಕು’ ಎಂದು ಹೇಳಿದರು.ಕೇಂದ್ರದ  ಮುಖ್ಯಸ್ಥ ಡಾ.ಎ.­ರವೀಂದ್ರ, ‘ನಗರವಾಸಿ­ಗಳ ಬದುಕನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು, ಕೈಗಾರಿಕೆಗಳು, ಸಾರ್ವಜ­ನಿಕರು ಮತ್ತು ಬಹುರಾಷ್ಟ್ರೀಯ ಕಂಪನಿ­ಗಳನ್ನು ಒಂದೆಡೆ ಸೇರಿಸಿ ಸ್ಮಾರ್ಟ್ ಸಿಟಿ ಕೌನ್ಸಿಲ್ – ಇಂಡಿಯಾವನ್ನು ಆರಂಭಿಸ­ಲಾಗಿದೆ‘  ಎಂದರು.ನಗರಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯ­ದರ್ಶಿ ಡಾ.ಎಂ.ರಾಮ­ಚಂದ್ರನ್ ಸಮರ್ಥ ಅಭಿವೃದ್ದಿ ಕೇಂದ್ರದ ದಶವಾರ್ಷಿಕ ವರದಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ‘ನಮ್ಮ ನಗರಗಳನ್ನು ಸ್ಮಾರ್ಟ್‌ ನಗರ­ಗಳಾಗಿ ಪರಿವರ್ತಿಸುವಲ್ಲಿ ಪ್ರಬಲ ಮತ್ತು ಮುಂದುವರೆದ ಇ– ಆಡಳಿತದ ಅವಶ್ಯ­ಕತೆ ಇದೆ. ಒಳಚರಂಡಿ, ತ್ಯಾಜ್ಯ ನಿರ್ವ­ಹಣೆ, ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ಸಂಪರ್ಕವನ್ನು ನಿರ್ವಹಿಸುವ ಸಂಸ್ಥೆಗಳ ನಡುವೆ ಸಂವಹನ ಮತ್ತು ಸಮನ್ವಯ ಸಾಧಿಸಬೇಕು’ ಎಂದರು.ಐಬಿಎಂನ ಹಿರಿಯ ಸಲಹೆಗಾರ ಶಂಕರ್ ಅಣ್ಣಾ­ಸ್ವಾಮಿ, ‘ನಗರಗಳ ಅಭಿ­ವೃದ್ಧಿ­ಯಲ್ಲಿ ಯಾವ ತಂತ್ರ­ಜ್ಞಾನ­­ವನ್ನು ಎಲ್ಲಿ, ಹೇಗೆ ಮತ್ತು ಯಾವ ಸಂದರ್ಭ­ದಲ್ಲಿ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ­ಯಿರಬೇಕು. ಸ್ಮಾರ್ಟ್ ನಗರ­ಗಳ ನಿರ್ಮಾಣದಲ್ಲಿ ಸ್ಥಳೀಯ ಜನತೆ, ಸಂಸ್ಕೃತಿ ಮತ್ತು ರಾಜಕೀಯ ಅಂಶಗ­ಳಿಗೆ ಆದ್ಯತೆ ನೀಡಬೇಕು’ ಎಂದರು.ಬ್ರಿಗೇಡ್ ಗ್ರೂಪ್‌ ಸದಸ್ಯ ಜಯ­ಶಂಕರ್ ಮಾತನಾಡಿ  ನಗರಗಳನ್ನು ಉಳಿಸುವಲ್ಲಿ ಮಳೆ ನೀರಿನ ಸಂಗ್ರಹ, ಅಂತರ್ಜಲ ಮರುಪೂರಣ, ಸೋಲಾರ್ ವಿದ್ಯುತ್ ಬಳಕೆಗೆ ಒತ್ತು ನೀಡಬೇಕು ಎಂದರು. ವೆಬ್‌­ಸೈಟ್: https://smartcitiescouncil.com  /india

ಪ್ರತಿಕ್ರಿಯಿಸಿ (+)