ಗುರುವಾರ , ಜೂನ್ 24, 2021
23 °C
ರಾಜಪಕ್ಸೆಗೆ ಪ್ರಧಾನಿ ಸಿಂಗ್‌ ಮನವಿ

‘ನಮ್ಮ ಮೀನುಗಾರರ ಮೇಲೆ ಕರುಣೆ ಇರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಯ್ ಪೈ ತಾವ್‌, ಮ್ಯಾನ್ಮಾರ್ (ಐಎಎನ್‌ಎಸ್‌): ‘ನಮ್ಮ ಮೀನುಗಾರರ ಸಮಸ್ಯೆಯನ್ನು ಮಾನವೀಯ ದೃಷ್ಠಿಯಿಂದ ಕಾಣುವಂತೆ’ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಮಂಗಳವಾರ ಕೋರಿದ್ದಾರೆ.‘ಬಿಮ್‌ಸ್ಟೆಕ್‌’ (ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ) ಅಂಗವಾಗಿ ಉಭಯ ನಾಯಕರು ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದರು.

‘ಮೀನುಗಾರರ ವಿವಾದ ಹೊಟ್ಟೆಪಾಡಿನ ಸಮಸ್ಯೆಯಾಗಿದೆ. ಹೀಗಾಗಿ ಮಾನವೀಯತೆ ದೃಷ್ಟಿಕೋನದಿಂದಲೇ  ವರ್ತಿಸುವಂತೆ ಶ್ರೀಲಂಕಾಕ್ಕೆ ಪ್ರಧಾನಿ ಸಿಂಗ್‌ ಅವರು ತಿಳಿಸಿದ್ದಾರೆ’ ಎಂದು  ಮಾತುಕತೆಯ ಬಳಿಕ ವಿದೇಶಾಂಗ ಇಲಾಖೆಯ ವಕ್ತಾರ ಸಯ್ಯದ್‌ ಅಕ್ಬರುದ್ದೀನ್‌ ತಿಳಿಸಿದ್ದಾರೆ.

ಈ ವೇಳೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಅಮೆರಿಕ ನೇತೃತ್ವದ ನಿರ್ಣಯದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.