‘ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ’

7
ವಿಕೆಟ್‌ ಪಡೆಯುವ ಕುದುರೆ ಶರತ್‌: ತರಬೇತುದಾರ ಅರುಣ್‌ ಮೆಚ್ಚುಗೆ

‘ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ’

Published:
Updated:
‘ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ’

ಬೆಂಗಳೂರು: ‘ಲೀಗ್‌ ಹಂತದಲ್ಲಿ ತೋರಿದ ಪ್ರದರ್ಶನ ಆಟಗಾರರ ವಿಶ್ವಾಸ ಇಮ್ಮಡಿ ಗೊಳಿಸಿದೆ. ಅದೇ ರೀತಿ ಕ್ವಾರ್ಟರ್‌ ಫೈನಲ್‌ನಲ್ಲೂ ಉತ್ತಮ ಆಟವಾಡುವ ಭರವಸೆಯಿದೆ. ಇತಿಹಾಸ ಏನೇ ಇರಲಿ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಆದರೆ, ಗೆಲ್ಲಲೇಬೇಕೆಂಬ ಗುರಿಯಿದೆ’–ಕರ್ನಾಟಕ ರಣಜಿ ತಂಡದ ಬ್ಯಾಟಿಂಗ್‌ ತರಬೇತುದಾರ ಜೆ. ಅರುಣ್‌ ಕುಮಾರ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಸ್ಪಷ್ಟಮಾತಿದು.

ಕರ್ನಾಟಕ ಹಿಂದಿನ ಎರಡೂ ರಣಜಿ ಋತುಗಳಲ್ಲಿ ಕ್ರಮವಾಗಿ ಹರಿಯಾಣ ಮತ್ತು ಸೌರಾಷ್ಟ್ರ ಎದುರು ಎಂಟರ ಘಟ್ಟದಲ್ಲಿಯೇ ನಿರಾಸೆ ಕಂಡಿತ್ತು.  ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ಸಾಕಷ್ಟು ಕಷ್ಟಪಟ್ಟು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಆದರೆ, ಈ ಸಲ ಸುಲಭ ವಾಗಿ ಎಂಟರ ಘಟ್ಟ ತಲುಪಿದೆ. ತಂಡದ ಸಾಧನೆ, ಸಾಮರ್ಥ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅರುಣ್‌ ಕುಮಾರ್‌ ಅವರು ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.*ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ಪದೇ ಪದೇ ನಿರಾಸೆ ಕಾಣುತ್ತಿದೆ. ಹಿಂದಿನ ಸೋಲುಗಳು ತಂಡವನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದೆಯೇ?

ಖಂಡಿತವಾಗಿಯೂ ಇಲ್ಲ. ಹಿಂದಿನ ಎರಡೂ ಋತುಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದಾಗ ಗೆಲ್ಲಲೇಬೇಕೆಂಬ ಒತ್ತಡಕ್ಕೆ ಒಳಗಾಗಿದ್ದು ನಿಜ.      ಆದ್ದರಿಂದಲೇ ಸೋಲು ಕಂಡೆವು. ಈ ಸಲ ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಜೊತೆಗೆ ತುಂಬಾ ನಿರಾಳವಾಗಿ ಉತ್ತರ ಪ್ರದೇಶದ ಸವಾಲನ್ನು ಎದುರಿಸುತ್ತೇವೆ.*ಕರ್ನಾಟಕದ ಸಾಮರ್ಥ್ಯವನ್ನು ಹೇಗೆ ವಿವರಿಸುತ್ತೀರಿ?

ನಮ್ಮ ತಂಡದಲ್ಲಿ ಅನುಭವಿ ಮತ್ತು ಅನನುಭವಿ ಆಟಗಾರರು ಇದ್ದಾರೆ. ವಿನಯ್‌ ಕುಮಾರ್‌, ರಾಬಿನ್‌ ಉತ್ತಪ್ಪ, ಅಭಿಮನ್ಯು ಮಿಥುನ್‌ ತಮ್ಮ ಅನುಭವವನ್ನು ಕಿರಿಯ ಆಟ ಗಾರರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ ನಮ್ಮ ತಂಡಕ್ಕೆ ಲೀಗ್‌ ಹಂತದ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಆಟಗಾರರ ನಡುವೆ ಉತ್ತಮ ಹೊಂದಾಣಿಕೆಯಿದೆ.* ಶರತ್‌ ಬೌಲಿಂಗ್‌ ಬಗ್ಗೆ ಹೇಳಿ?

ಶರತ್‌ ರಣಜಿಗೆ ಪದಾರ್ಪಣೆ ಮಾಡಿ ಒಂದೇ ವರ್ಷದಲ್ಲಿ ಸಾಕಷ್ಟು ಕಲಿತಿದ್ದಾರೆ. ಅವರು ತಂಡದ  ಪ್ರಮುಖ ಭಾಗವೇ ಆಗಿದ್ದಾರೆ. ಎದುರಾಳಿ ಬ್ಯಾಟ್ಸ್‌ಮನ್ ಯಾರೇ ಇರಲಿ  ಅದ್ಯಾವುದನ್ನೂ ಲೆಕ್ಕಿಸದೇ ಬೌಲ್‌ ಮಾಡುತ್ತಾರೆ. ಅವರು ಬೌಲ್‌ ಮಾಡಲು ಓಡಿ ಬರುವ ರೀತಿಯೇ ತುಂಬಾ ಚೆನ್ನಾಗಿದೆ. ಆದ್ದರಿಂದ ಶರತ್‌ಗೆ ನಮ್ಮ ತಂಡದವರು ವಿಕೆಟ್‌ ಪಡೆಯುವ ಕುದುರೆ ಎಂದು ತಮಾಷೆ ಮಾಡುತ್ತೇವೆ.ಶರತ್‌ ದೆಹಲಿ ಎದುರಿನ ಪಂದ್ಯದಲ್ಲಿ ಎರಡು ಸಲ ಗೌತಮ್‌ ಗಂಭೀರ್‌ ವಿಕೆಟ್‌ ಪಡೆದಿದ್ದರು. ಡೇವಿಡ್‌ ಜಾನ್ಸನ್‌ ಹಾಗೂ ದೊಡ್ಡಗಣೇಶ್‌ ಅವರ ಬೌಲಿಂಗ್‌ ಶೈಲಿಯನ್ನು ನೆನಪಿಸುವಂತೆ ಅವರು ಬೌಲ್‌ ಮಾಡುತ್ತಾರೆ.*ಉತ್ತರ ಪ್ರದೇಶ ತಂಡದ ಬಗ್ಗೆ ಹೇಳಿ?

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರರು ಆ ತಂಡದಲ್ಲಿದ್ದಾರೆ. ಆದ್ದರಿಂದ ಎದುರಾಳಿಗಳನ್ನು ಸುಲಭವಾಗಿ ಪರಿ ಗಣಿಸುವುದಿಲ್ಲ. ಅದೇನೇ ಇರಲಿ. ತವರು ನೆಲದಲ್ಲಿ ನಾವು ಉತ್ತಮ ಪ್ರದರ್ಶನ ತೋರಬೇಕೆಂದು ಎಲ್ಲರೂ ನಿರೀಕ್ಷೆ ಮಾಡುತ್ತಾರೆ. ಅದಕ್ಕಾಗಿ ನಮ್ಮ ತಂಡ ಸಜ್ಜಾಗಿದೆ.*ಸ್ಟುವರ್ಟ್‌ ಬಿನ್ನಿ ತಂಡದಲ್ಲಿ ಇಲ್ಲದಿರುವುದು ಹಿನ್ನಡೆ ಉಂಟುಮಾಡಿದೆಯೇ?

ಸ್ಟುವರ್ಟ್‌ ಬಿನ್ನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ  ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಬಿನ್ನಿ ಅತ್ಯುತ್ತಮ ಆಲ್‌ರೌಂಡರ್‌. ಇದರಿಂದ ಬೌಲಿಂಗ್‌ ವಿಭಾಗಕ್ಕೆ ಕೊಂಚ ಹಿನ್ನಡೆ ಆಗಬಹುದು. ಆದರೆ, ಗಾಯ ದಿಂದ ಚೇತರಿಸಿಕೊಂಡಿರುವ ರಾಬಿನ್‌ ಉತ್ತಪ್ಪ ಈ ಸ್ಥಾನವನ್ನು ತುಂಬಲು ಸಮರ್ಥರಾಗಿದ್ದಾರೆ.*ಇನ್ನೊಂದು ಸುದ್ದಿ...

**ರಣಜಿ ಕ್ವಾರ್ಟರ್‌ ಫೈನಲ್‌ ನಾಳೆಯಿಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry