‘ನಾಡನ್ನು ಕಟ್ಟುವ ಶಕ್ತ ಸಾಹಿತ್ಯ ಹೊರಹೊಮ್ಮಲಿ’

7

‘ನಾಡನ್ನು ಕಟ್ಟುವ ಶಕ್ತ ಸಾಹಿತ್ಯ ಹೊರಹೊಮ್ಮಲಿ’

Published:
Updated:

ಚನ್ನಪಟ್ಟಣ: ಶತಮಾನಗಳಿಂದ ಸಂಸ್ಕೃತಿಗೆ ಪೂರಕವಾಗಿ ನಿರ್ಮಾಣ ವಾಗುತ್ತಿದ್ದ ಸಾಹಿತ್ಯ ಇತ್ತೀಚಿನ ದಿನ ಗಳಲ್ಲಿ ಸಂಸ್ಕೃತಿಯನ್ನು ಹಾಳುಗೆಡ ವುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾ ಪಕ ಡಾ.ಮಧುಸೂದನಾ ಚಾರ್ಯ ಜೋಷಿ ವಿಷಾದಿಸಿದರು.



ಪಟ್ಟಣದ ವಿದ್ಯಾನಿಕೇತನ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಪೂರ್ತಿ ಸಾಮಾ ಜಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ ಇತ್ತೀಚಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳು ಹೊರ ಬರುತ್ತಿವೆಯಾದರೂ ಸಾಂಸ್ಕೃತಿಕವಾಗಿ ನಾಡನ್ನು ಕಟ್ಟುವ ಸಾಹಿತ್ಯ ಹೊರ ಬರುತ್ತಿಲ್ಲ ಎಂದರು.



ಆಯಾ ಕಾಲಘಟ್ಟದಲ್ಲಿ ಕ್ರಾಂತಿ ಕಾರಕ ಬದಲಾವಣೆಗೆ ನಾಂದಿ ಹಾಡಿ ರುವ ಹಿರಿಮೆ ಕನ್ನಡ ಸಾಹಿತ್ಯಕ್ಕಿದೆ. ಭಾರತದ ಬೇರೆ ಯಾವ ಭಾಷೆಗಳಿಗೂ ಸಿಗದ ಸ್ಪಂದನೆ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಸಿಗುತ್ತಿದೆ. ಜಾಗತಿಕ ಮಟ್ಟ ದಲ್ಲಿ ಕನ್ನಡ ಬೆಳವಣಿಗೆ ಹೊಂದುತ್ತಿದೆ ಆದರೆ ಇದಕ್ಕೆ ಪೂರಕವಾದ ತಲ್ಲಣ ಭಾಷೆಯನ್ನು ಕಾಡುತ್ತಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಮತ್ತಷ್ಟು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.



ವಿಶ್ವಭಾರತಿ ಎಜುಕೇಷನ್

ಟ್ರಸ್ಟ್‌ನ ಧರ್ಮದರ್ಶಿ ಚಿತ್ರಾ ಲಿಂಗೇಶ್‌ಕುಮಾರ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿ ಯರು ಉತ್ತಮ ಸಾಧನೆಗಳನ್ನು ಮಾಡುತ್ತಿ ದ್ದಾರೆ. ಕಾಲೇಜು ದಿನಗಳು ನಿಜಕ್ಕೂ ಮಹತ್ವ ಪೂರ್ಣವಾದುದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಜೀವನವನ್ನು ಕಳೆದು ಕೊಳ್ಳದೆ ಪ್ರತಿ ಯೊಂದು ಕ್ಷಣದಲ್ಲೂ ಅಮೂಲ್ಯ ವಾದ ಸಾಧನೆ ಮಾಡಲು ಎಲ್ಲರೂ ಶ್ರಮಿಸಬೇಕು’ ಎಂದರು.



ಕಲ್ಪವೃಕ್ಷ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಸಿ.ಶೇಖರ್ ಕಾರ್ಯ ಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಟಿ.ಎಂ.ರಾಜು, ವೈದ್ಯ ಡಾ.ಅಕ್ರಂಪಾಷ, ವಿಚಾರವಾದಿ ವೇದಿಕೆಯ ಎಸ್‌.ಎನ್. ನಂದಕುಮಾರ್ ಹಾಜರಿದ್ದರು. ಉಪನ್ಯಾಸಕರಾದ ಬಿ.ಪಿ.ಸುರೇಶ್‌, ಶಿವಮ್ಮ, ಮಹದೇವ್, ಚೇತನ್‌ ಕುಮಾರ್, ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry