‘ನಾವು ಉದ್ಯೋಗ ಕೊಡುವ ಮಾಲಿಕರಾಗಬೇಕು’

7

‘ನಾವು ಉದ್ಯೋಗ ಕೊಡುವ ಮಾಲಿಕರಾಗಬೇಕು’

Published:
Updated:

ಯಾದಗಿರಿ: ನಾವು ಉದ್ಯೋಗ ಕೊಡುವ ಮಾಲಿಕರಾಗಬೇಕು. ಉದ್ಯೋ­ಗ­­ಕ್ಕಾಗಿ ಪ್ರಯತ್ನ ಮಾಡುವವ­ರಾಗಬಾರದು ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ  ಹೇಳಿದರು.ತಾಲ್ಲೂಕಿನ ಸೈದಾಪುರದ ವಿದ್ಯಾ­ವರ್ಧಕ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾ-­ರಂಭದಲ್ಲಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಸೃಜನಶೀಲನತೆಯನ್ನು ಸೃಷ್ಟಿಸುವ ಕೆಲಸ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವ ಶಕ್ತಿಯನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.ಪ್ರತಿಯೊಬ್ಬರು ಸ್ವಾವಲಂಬಿ ಜೀವನ ಮಾಡಬೇಕು. ಅದಕ್ಕಾಗಿ ಗುಣಮಟ್ಟದ ಹಾಗೂ ಜೀವನಾಧಾರಿತ ಶಿಕ್ಷಣವನ್ನು ಸಂಸ್ಥೆಗಳು ನೀಡಬೇಕು ಎಂದರು.

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರೌಢಶಾಲೆ, ಪದವಿ­ಪೂರ್ವ ಹಾಗೂ ಡಿ.ಇಡಿ. ಕಾಲೇಜಿನ ಮಕ್ಕಳಿಗೆ ಅವರು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲರಡ್ಡೆಪ್ಪಗೌಡ ಕಣೇಕಲ್, ವಕೀಲ ಎಸ್‌.ಬಿ. ಪಾಟೀಲ, ಶಾಂತರಡ್ಡಿ, ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ­ಗೌಡ ಕಡೇಚೂರ, ಉಪಾಧ್ಯಕ್ಷ ಬಸವಂತರಾಯಗೌಡ ಸೈದಾಪುರ, ಕಾರ್ಯದರ್ಶಿ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ, ಸಹ ಕಾರ್ಯ­ದರ್ಶಿ ಮುಕುಂದಕುಮಾರ ಅಲಿ­ಝಾರ, ಕೋಶಾಧ್ಯಕ್ಷ ಭೀಮಣ್ಣಗೌಡ ಹೊಸಗೌಡರ ಕೂಡಲೂರ, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮ­ರಡ್ಡಿ ಸಂಬರ, ಬಸ್ಸಪ್ಪಗೌಡ ಬೆಳಗುಂದಿ ಇದ್ದರು. ಶಿಕ್ಷಕ ವಿಜಯಕುಮಾರ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ: ಸುವರ್ಣ ಮಹೋತ್ಸವ ಸಮಾರೋಪ ಸಮಾ­ರಂಭದ ಅಂಗವಾಗಿ ಶಾಲಾ ಹಾಗೂ ಕಾಲೇಜಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಕನ್ನಡ, ತೆಲಗು, ಮಾರಾಠಿ ಗೀತೆಗಳು ಹಾಗೂ ಭಜನೆ ಪದ, ನಾಟಕ, ದೇಶಭಕ್ತಿಗಳ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry