‘ನಾಸ್ಕಾಂ’ಗೆ ಹೊಸಅಧ್ಯಕ್ಷ

7

‘ನಾಸ್ಕಾಂ’ಗೆ ಹೊಸಅಧ್ಯಕ್ಷ

Published:
Updated:

ನವದೆಹಲಿ(ಪಿಟಿಐ): ‘ತಂತ್ರಾಂಶ ಮತ್ತು ಸೇವಾ ಕಂಪೆ­ನಿ­ಗಳ ರಾಷ್ಟ್ರೀಯ ಸಂಸ್ಥೆ’ಗೆ (ನಾಸ್ಕಾಂ)ಅಧ್ಯಕ್ಷ­ ರಾಗಿ ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು.ಸೋಮ್ ಮಿತ್ತಲ್‌ (2007–13) ಅವರಿಂದ ತೆರವಾಗಿರುವ ಜಾಗಕ್ಕೆ ಚಂದ್ರಶೇಖರ್‌ ಅವರು ನೇಮಕ­ಗೊಂಡಿದ್ದಾರೆ. ‘ನಾಸ್ಕಾಂ’ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ)ನ ಮತ್ತು ‘ವ್ಯವಹಾರ ಪ್ರಕ್ರಿಯೆ ನಿರ್ವಹಣಾ’ ಉದ್ಯಮದ ಪ್ರಾತಿನಿಧಿಕ

ಸಂಸ್ಥೆಯಾಗಿದೆ.ಚಂದ್ರಶೇಖರ್ ಅವರು ರಾಸಾಯನ ಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry