‘ನಿಮಗೇಕೆ ಮತ ನೀಡಬೇಕು?’

7

‘ನಿಮಗೇಕೆ ಮತ ನೀಡಬೇಕು?’

Published:
Updated:

ಬೆಂಗಳೂರು: ‘ಕಳೆದ 18 ವರ್ಷಗಳ ಕಾಲ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಅನಂತ­ಕುಮಾರ್, ತಾವು ತಮ್ಮ  ಕ್ಷೇತ್ರದಲ್ಲಿ ಯಾವ ಕೆಲಸ ಮಾಡಿದ್ದೀರಿ?’ ಎಂದು ಚಾಣಕ್ಯ ಜನ  ಗಣ ಮನ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಎಂ.ವಾಸು­ದೇವರಾವ್ ಕಶ್ಯಪ್ ಪ್ರಶ್ನಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ತಮ್ಮ ಕ್ಷೇತ್ರ­ದಲ್ಲಿ ಯಾವ ಒಂದೂ ಅಭಿವೃದ್ಧಿ ಕಾರ್ಯ ಮಾಡದ ಮತ್ತು ಚುನಾವ­ಣೆಯ ನಂತರ ಜನರಿಗೆ ಸಿಗದ ನೀವು ಈಗ ಹೇಗೆ ಮತ ಕೇಳುತ್ತೀರಿ?’ ಎಂದು ಪ್ರಶ್ನಿಸಿದರು.‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನೀರು, ಕಸ ನಿರ್ವಹಣೆ, ಉತ್ತಮ ರಸ್ತೆಯ ಕೊರತೆಯಿದೆ. ಯಾವ ಸಮಸ್ಯೆಗೂ ಸ್ಪಂದಿಸದ ನಿಮಗೆ ನಾವೇಕೆ ಮತ ನೀಡಬೇಕು ಎಂಬು

ದನ್ನು ವಿವರಿಸಿ’ ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry