ಶನಿವಾರ, ಜನವರಿ 18, 2020
18 °C

‘ನಿಯಮಿತ ಅಧ್ಯಯನದಿಂದ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ನಿಯಮಿತ ಅಧ್ಯಯನದಿಂದ ಉತ್ತಮ ಅಂಕ ಗಳಿಕೆ ಸಾಧ್ಯ ಎಂದು ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶ್ರೀವರ್ಮ ಅಜ್ರಿ ತಿಳಿಸಿದರು.ತಾಲ್ಲೂಕಿನ ನಿಟ್ಟೆ ಡಾ.ಎನ್.­ಎಸ್.­ಎ.ಎಂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅಂಕಗಳಿಕೆ ಮಾತ್ರವಿದ್ದರೂ ಸಾಕಾಗುವುದಿಲ್ಲ. ಅಂಕಗಳಿಕೆಯ ಜೊತೆ ಜ್ಞಾನವೂ ಅಗತ್ಯವಾಗಿರುತ್ತದೆ. ಅದರೊಂದಿಗೆ ಕೌಶಲ್ಯವೂ ಅಗತ್ಯ. ಈ ಕೌಶಲ್ಯವನ್ನು ಆಗಾಗ ಪರಿಷ್ಕರಿಸಿ­ಕೊಳ್ಳಬೇಕು. ಕೌಶಲ್ಯದ ಜೊತೆ ಬಿಕ್ಕಟ್ಟು ನಿರ್ವಹಣೆಯ ಕುರಿತೂ ತಿಳಿದಿರಬೇಕಾಗುತ್ತದೆ.

ತಮ್ಮ ತಮ್ಮ ಅನುಭವಗಳ ಆಧಾರದಲ್ಲಿ ಬಿಕ್ಕಟ್ಟು ನಿರ್ವಹಣೆ ಸಾಧ್ಯ, ಇದು ಸಾಮಾಣ್ಯ ವ್ಯಕ್ತಿಗಳೂ ರೂಢಿಸಿಕೊಳ್ಳಬಹುದಾದ ಸಂಗತಿ. ಇತ್ತೀಚಿನ ದಿನಗಳಲ್ಲಿ ನಡತೆ ಪರಿಷ್ಕರಣೆಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಅನುತ್ತೀರ್ಣ­ರಾದಾಗ ನಿರಾಶರಾಗಬೇಕಾಗಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಹಸ್ತಪ್ರತಿ ‘ಸ್ಪಂದನ’ ಸಂಚಿಕೆಯನ್ನು ಅನಾವರಣಗೊಳಿ­ಸಲಾಯಿತು.ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಡಿಸಿಲ್ವ ಶುಭಾ­ಶಂಸನೆ ನೆರವೇರಿಸದರು. ಪ್ರಾಂಶುಪಾ­ಲರಾದ ಇಂದಿರಾ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸ­ಲಾಯಿತು.ಹಿರಿಯ ಉಪನ್ಯಾಸಕ ಸುರೇಶ್ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಪ್ನಾ ಸ್ಪಂದನದ ಕುರಿತು ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಆಚಾರ್ಯ, ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಪ್ರೇಮ್ ಜಾನ್ಸನ್ ವಂದಿಸಿದರು.

ಪ್ರತಿಕ್ರಿಯಿಸಿ (+)