ಶುಕ್ರವಾರ, ಜನವರಿ 17, 2020
20 °C

‘ನಿವೃತ್ತ ನೌಕರರು ಯುವಕರಿಗೆ ಮಾದರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಸಂಘಟನೆಯಿಂದ ಸಹ­ಕಾರದ ಮೂಲಕ  ಸಾಮಾಜಿಕ ಕ್ಷೇತ್ರ­­ದಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿ­ರುವ ನಿವೃತ್ತ ನೌಕರರು  ಯುವಕರಿಗೆ ಮಾದರಿಯಾಗಿದ್ದಾರೆ  ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.ನಗರದ ಗುರುಕುಲಾನಂದ­ಶ್ರಮ­ದಲ್ಲಿ ಮಂಗಳವಾರ ನಡೆದ ನಿವೃತ್ತ ನೌಕ­ರರ ದಿನಾಚರಣೆ, ಸನ್ಮಾನ ಸಮಾ­ರಂಭ­ದಲ್ಲಿ ಮಾತನಾಡಿ, ಜೀವನದಲ್ಲಿ ವಯಸ್ಸು, ಆಯಸ್ಸು, ದುಡಿಮೆ ಈ 3  ಕಾಲಗಳಿಗೆ ಬಹಳ ಮಹತ್ವ ನೀಡಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು. ಬಿಇಒ ಬಿ.ಜೆ.ಪ್ರಭುಸ್ವಾಮಿ ಮಾತ­ನಾಡಿದರು. ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.­ಬೋಬಡೆ, ತಾಲ್ಲೂಕು ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ ಮಾತನಾಡಿದರು.75 ವರ್ಷ ತುಂಬಿದ ಸಂಘದ ಹಿರಿಯ ಹತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಕೆ.ಬಾಲಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ವಿ.ಎನ್. ಮಹಾದೇವಯ್ಯ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)