‘ನೂತನ ತಂತ್ರಜ್ಞಾನದ ಲಾಭ ಬಳಸಿ’

7

‘ನೂತನ ತಂತ್ರಜ್ಞಾನದ ಲಾಭ ಬಳಸಿ’

Published:
Updated:

ದಾವಣಗೆರೆ: ಜೀವರಸಾಯನಶಾಸ್ತ್ರ ವಿಷಯದ ಕಿರಿಯ ತಜ್ಞರ ಸಂಶೋಧನೆ ಹಾಗೂ ಪ್ರತಿಭೆ ಅನಾವರಣಕ್ಕೆ ಜೀವರಸಾಯನಶಾಸ್ತ್ರ ಸಮ್ಮೇಳನ ಉತ್ತಮ ವೇದಿಕೆ ಎಂದು ಜಿಲ್ಲಾ ಉಸು್ತವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದ ಬಾಪೂಜಿ ಸಭಾಂಗಣದಲ್ಲಿ ಜೆಜೆಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ‘ವೈದ್ಯಕೀಯ ಜೀವರಸಾಯನ ಶಾಸ್ತ್ರ ತಜ್ಞರ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.ಜೀವರಸಾಯನಶಾಸ್ತ್ರ ವಿಭಾಗದ ತಜ್ಞರು ಇಂತಹ ಸಮ್ಮೇಳನವನ್ನು ಆಯೋಜಿಸಿರುವುದು ಸಂತೋಷ ವಾಗುತ್ತದೆ. ಇದರಿಂದ ಈ ವಿಭಾಗದಲ್ಲಿ ಅಧ್ಯಯನ ಮಾಡುವವರಿಗೆ ಹಾಗೂ ಸಂಶೋಧಕರಿಗೆ ಈ ರೀತಿಯ ಸಮ್ಮೇಳನಗಳಿಂದ ಹೆಚ್ಚು ಅನುಕೂಲವಾಗಲಿದೆ. ವಿವಿಧ ವಿಭಾಗಗಳು ಕೂಡ  ಇಂತಹ ಸಮ್ಮೇಳನಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯಾಗುತ್ತಿರುವ ನೂತನ ತಂತ್ರಜ್ಞಾನ, ಅವಿಷ್ಕಾರಗಳನ್ನು ವಿಷಯದ ಹಿರಿಯ ತಜ್ಞರು ಚೆನ್ನಾಗಿ ಬಳಸಿಕೊಂಡು, ವಿವಿಧೆಡೆಯಿಂದ ವೈದ್ಯರನ್ನು ಕರೆಯಿಸಿ, ತರಬೇತಿ ನೀಡುವುದರ ಜತೆಗೆ ಜನಸಾಮಾನ್ಯರಿಗೆ ಕಡಿಮೆ ಖರ್ಚಿನಲ್ಲಿ ಸರಳವಾಗಿ ಚಿಕಿತ್ಸೆ ನೀಡುವಲ್ಲಿ ಸಹಕರಿಸಬೇಕು ಎಂದು ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ಪರಿಣಿತ ವಿಷಯ ತಜ್ಞರಿಗೆ ಕಿವಿಮಾತು ಹೇಳಿದರು.ಇದೊಂದು ಉಪಯುಕ್ತವಾದ ಸಮ್ಮೇಳನ ಇದನ್ನು ಆಯೋಜಿಸಿರುವ ‘JJMC-– AMBKC CON’ ಅಸೋಸಿಯೇಷನ್‌ ಸಂಘಟಕರ ಕೆಲಸ ಶ್ಲಾಘನೀಯ. ಈ ಅಸೋಸಿಯೇಷನ್‌ ಕಿರಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಇನ್ನು ಹೆಚ್ಚಿನ ಸಮ್ಮೇಳನ, ಕಾರ್ಯಾಗಾರಗಳನ್ನು ನಡೆಸಲಿ ಎಂದು ಹಿರಿಯ ವೈದ್ಯ ಡಾ.ಆಲೂರು ಮಂಜುನಾಥ ಹಾರೈಸಿದರು.ಇದೇ ಸಂದರ್ಭದಲ್ಲಿ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.

ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ರಾಜ್ಯದ ವಿವಿಧೆಡೆಯ ಸುಮಾರು 200ಕ್ಕೂ ಅಧಿಕ ಸ್ನಾತಾಕೋತ್ತರ ವಿದ್ಯಾರ್ಥಿಗಳು  ಮತ್ತು ವಿಷಯ ಸಂಶೋಧಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಡಾ.ಗುರುಪಾದಪ್ಪ, ಡಾ.ಸಂಜೀವಿ ರಾವ್‌, ಡಾ. ಗೋವಿಂದರಾಜು, ಡಾ.ಎಂ.ಜಿ.ರಾಜಶೇಖರಪ್ಪ ಮತ್ತು ಡಾ.ಕೆ.ದತ್ತಾತ್ರೇಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry