‘ನ್ಯಾರೋಕ್ಯಾಸ್ಟರ್‌ಗೆ ಅರಮನೆ ಮಂಡಳಿ ಹಣ ನೀಡಿಲ್ಲ’

7

‘ನ್ಯಾರೋಕ್ಯಾಸ್ಟರ್‌ಗೆ ಅರಮನೆ ಮಂಡಳಿ ಹಣ ನೀಡಿಲ್ಲ’

Published:
Updated:

ಬೆಂಗಳೂರು: ಮೈಸೂರು ಅರಮನೆಗೆ ಬರುವ ವಿದೇಶಿ ಪ್ರವಾಸಿ­ಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಾರಿಗೆ ತರ­ಲಾಗಿರುವ ಆಡಿಯೋ ಕಿಟ್‌ ಸಿದ್ಧಪಡಿಸಲು ಅರಮನೆ ಮಂಡಳಿ ಹಣ ನೀಡಿಲ್ಲ ಎಂದು ಮಂಡಳಿಯ ನಿವೃತ್ತ ಉಪ ನಿರ್ದೇಶಕ ಪಿ.ವಿ.ಅವರಾದಿ ಸ್ಪಷ್ಟಪಡಿಸಿದ್ದಾರೆ.ನ್ಯಾರೊ ಕ್ಯಸ್ಟರ್‌ ಇಂಡಿಯಾ ಸಂಸ್ಥೆ ಪ್ರೊಗ್ರಾಮಿಂಗ್‌ ಮತ್ತು ಇತರ ಎಲ್ಲ ವೆಚ್ಚವನ್ನು ತಾನೇ ಭರಿಸಿ ಆಡಿಯೋ ಕಿಟ್‌ ಸಿದ್ಧಪಡಿಸಿದ ನಂತರ ಅದನ್ನು ಸೇವೆಗೆ ನೀಡಿದೆ. ಈ ಸಂಬಂಧ ಮಂಡಳಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಾಚ್ಯವಸ್ತು ಇಲಾಖೆಯ ನಿವೃತ್ತ ನಿರ್ದೇಶಕ ಡಾ.ನಾಗರಾಜ­ರಾವ್‌ ಅವರ ನೇತೃತ್ವದ ಸಮಿತಿ ಟೆಂಡರ್‌ ಪರಿಶೀಲನೆ ಮಾಡಿ ವರದಿ ನೀಡಿತ್ತು. ಆ ಪ್ರಕಾರವೇ ಟೆಂಡರ್‌ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆದರೂ ಸಹಕರಿಸಲು ತಾವು ಸಿದ್ಧ ಎಂದು ಅವರು ಹೇಳಿದ್ದಾರೆ.ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಹಾಗೂ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry