‘ನ್ಯೂಯಾರ್ಕ್‌ ಟೈಮ್ಸ್‌’ ವಿರುದ್ಧ ಮಾನನಷ್ಟ ನೋಟಿಸ್‌

7

‘ನ್ಯೂಯಾರ್ಕ್‌ ಟೈಮ್ಸ್‌’ ವಿರುದ್ಧ ಮಾನನಷ್ಟ ನೋಟಿಸ್‌

Published:
Updated:

ಇಸ್ಲಾಮಾಬಾದ್ (ಪಿಟಿಐ): ಲಂಡನ್‌ ಮೂಲದ, ಪಕ್ಷದ ಮುಖ್ಯಸ್ಥ ಅಲ್ತಫ್‌ ಹುಸೇನ್‌ ವಿರುದ್ಧ ಅವಮಾನಕರ ರೀತಿ­ಯಲ್ಲಿ ವರದಿ ಪ್ರಕಟಿಸಿದ್ದಕ್ಕಾಗಿ ಪಾಕಿ­ಸ್ತಾನದ ಎಂಕ್ಯುಎಂ ಪಕ್ಷವು ನ್ಯೂಯಾರ್ಕ್‌  ಟೈಮ್ಸ್‌ ವಿರುದ್ಧ ಒಂದು ಕೋಟಿ ಡಾಲರ್ ( ` 63 ಕೋಟಿ) ಮಾನನಷ್ಟ ನೋಟಿಸ್‌ ಜಾರಿಮಾಡಿದೆ.‘ಇದು ಆಧಾರರಹಿತ ವರದಿ.  ಹುಸೇನ್‌ ಅವರ ಗೌರವಕ್ಕೆ ಚ್ಯುತಿ ಬಂದಿದೆ’ ಎಂದು ನೋಟಿಸ್‌ನಲ್ಲಿ  ಆರೋ­ಪಿ­­ಸಲಾಗಿದೆ. ಪತ್ರಿಕೆಯ ಸಂಪಾ­ದ­ಕರು, ಮುದ್ರಕರು ಮತ್ತು ಈ ವರದಿ ಬರೆದ ಪತ್ರಕರ್ತ ಡಿಕ್ಲೇನ್‌ ವಾಷ್‌ ಅವರಿಗೆ 7 ದಿನಗಳಲ್ಲಿ ಬೇಷರತ್‌ ಕ್ಷಮೆ ಕೇಳುವಂತೆ ಪಕ್ಷವು ಸೂಚಿಸಿದೆ.

 

ದಂಡ ಕಟ್ಟಿ ಇಲ್ಲವೇ ಕಾನೂನು ಕ್ರಮ ಎದು­ರಿಸಿ ಎಂದೂ ಎಚ್ಚರಿಕೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry