ಸೋಮವಾರ, ಜೂನ್ 21, 2021
29 °C

‘ಪಕ್ಷ ಬದಲಿಸುವ ಶಿವನಗೌಡ ನಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಾಜಿ ಸಚಿವ ಶಿವನಗೌಡ ನಾಯಕ ಕಾಂಗ್ರೆಸ್‌ ಪಕ್ಷದಲ್ಲಿ ಬೆಳೆದು ಜೆಡಿಎಸ್ ತೊರೆದು ಹಣದ ಆಸೆಗೆ ಬಿಜೆಪಿಗೆ ಸೇರಿ ಅಧಿಕಾರ ಅನುಭವಿಸಿ ತಮ್ಮಂಥವರಿಗೆ ಟಿಕೆಟ್ ಕಟ್‌ ಮಾಡಿಸಿದ್ದಾರೆ. ಈಗ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ನಿಯೋಜಿತ ಅಭ್ಯರ್ಥಿ ಶಿವನಗೌಡ ನಾಯಕ ದುರಂಹ­ಕಾರಿ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕಾಂಗ್ರೆಸ್ ಕಾರ್ಯ­ಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಜನತೆಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಮನವಿ ಮಾಡಬೇಕು ಎಂದು ಮಾಜಿ ಶಾಸಕ ಎ. ಪಾಪಾರೆಡ್ಡಿ ಹೇಳಿದರು.ಬುಧವಾರ ರಾತ್ರಿ ತಮ್ಮ ನಿವಾಸದ ಆವರಣದಲ್ಲಿ ತಮ್ಮ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಶಾಸಕ ಎ. ವೆಂಕಟೇಶ ನಾಯಕ ಮಾತನಾಡಿ, ಶಿವನಗೌಡ ನಾಯಕ 5 ವರ್ಷ ಶಾಸಕರಾಗಿ ಕೋಟಿಗಟ್ಟಳೆ ಲೂಟಿ ಮಾಡಿದ್ದಾರೆ. ಪ್ರಜಾಪ್ರಭುತ್ವ ಹಾಳು ಮಾಡುವ ಪ್ರಯತ್ನ ನಡೆಸಿದ್ದಾರೆ. ಈಗ ಹಣದ ಮೂಲಕ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರ­ರು ಅಪ್ಪಿತಪ್ಪಿ ಮತ ಹಾಕಿದರೆ ಜಿಲ್ಲೆ 5 ವರ್ಷ ನರಕಯಾತನೆ ಅನುಭವಿಸಬೇ­ಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕಾರ್ಯ­ಕರ್ತರು ಮತದಾರರಿಗೆ ಮನ­ವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.ಮುಖಂಡರಾದ ಬುಡ್ಡನ­ಗೌಡ, ಹರವಿ ನಾಗನಗೌಡ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ ಬಸವ­ರಾಜರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಪೋಗಲ ಚಂದ್ರಶೇಖರರೆಡ್ಡಿ, ನಗರಸಭೆ ಸದಸ್ಯ ಎನ್ ಶ್ರೀನಿವಾಸರೆಡ್ಡಿ, ವಿರೇಶ ಬೂತಪ್ಪ, ಟಿ ಮಲ್ಲೇಶ, ಎಪಿಎಂಸಿ ಸದಸ್ಯ ಬಾಬುರಾವ್, ಎಪಿಎಂಸಿ ನಿರ್ದೇಶಕ ಲಕ್ಷ್ಮೀರೆಡ್ಡಿ, ಮುಖಂಡರಾದ ಜಯವಂತರಾವ ಪತಂಗೆ, ಜಗನ್ನಾಥ ಸುಂಕಾರಿ, ಜಗನ್ನಾಥ ಕುಲಕರ್ಣಿ, ಎನ್ ಲಾಲಪ್ಪ, ಜಿ ಶೇಖರರೆಡ್ಡಿ, ಬಿ ಗಿರೆಣ್ಣ, ಶಶಿಧರ ಏಗನೂರು, ಗುಡ್ಸಿ ನಗರಸರೆಡ್ಡಿ, ಲಿಂಬೇಕಾಯಿ ಭೀಮರೆಡ್ಡಿ, ಅನ್ವರ­ಖಾನ್, ಮಹಮ್ಮದ್ ಅಲಿ, ಆರ್ ಚನ್ನಪ್ಪ, ಎಸ್ ಜನಾರ್ದನರೆಡ್ಡಿ, ಯು ಗೋವಿಂದ­ರೆಡ್ಡಿ, ಕೆ ರವಿ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.