ಮಂಗಳವಾರ, ಜನವರಿ 21, 2020
28 °C

‘ಪಟೇಲ್‌ ಸ್ಮರಣೆ: ಡಿ. 15 ರಂದು ಏಕತಾ ಓಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪುಣ್ಯಸ್ಮರಣೆ ನಿಮಿತ್ತ ಡಿಸೆಂಬರ್‌ 15 ರಂದು ನಗರದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿದೆ ಎಂದು ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ್‌ ಟೊಣ್ಣೆ ತಿಳಿಸಿದರು. ಏಕತಾ ಓಟ ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಬರೀದ್‌ಶಾಹಿ ಉದ್ಯಾನ­­ದಿಂದ ಆರಂಭಗೊಂಡು ಮಡಿವಾಳೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಶಿವಾಜಿ ವೃತ್ತದ ಬಳಿ ಸಮಾರೋಪ­ಗೊಳ್ಳಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಹಿರಿಯ ಸ್ವಾತಂತ್ರ್ಯ ಸೇನಾನಿ­ಯೊಬ್ಬ­ರನ್ನು ಉದ್ಘಾಟನೆಗೆ ಆಹ್ವಾನಿಸಲು ನಿರ್ಧರಿಸ­ಲಾಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನ ಓಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಗುಜರಾತ್‌ನ ನರ್ಮದಾ ನದಿ ಸಮೀಪ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರ ಪ್ರತಿಮೆ ಆಗಲಿದೆ ಎಂದು ಹೇಳಿದರು.ವಲ್ಲಭಬಾಯಿ ಪಟೇಲ್‌ ಅವರ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿ­ಸಲು ಏಕತಾ ಓಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗು­ತ್ತಿದೆ. ಡಿಸೆಂಬರ್ 15 ರಂದು ದೇಶದ ಸಾವಿರಕ್ಕೂ ಅಧಿಕ ಪಟ್ಟಣಗಳಲ್ಲಿ ಏಕಕಾಲಕ್ಕೆ ನಡೆಯ­ಲಿರುವ ಏಕತಾ ಓಟ ಹೊಸ ದಾಖಲೆ ಸೃಷ್ಟಿಸಲಿದೆ ಎಂದರು.

ಪ್ರತಿಕ್ರಿಯಿಸಿ (+)