ಶುಕ್ರವಾರ, ಮಾರ್ಚ್ 5, 2021
23 °C

‘ಪರಿಸರ ರಕ್ಷಣೆ ನಮ್ಮ ಹೊಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪರಿಸರ ರಕ್ಷಣೆ ನಮ್ಮ ಹೊಣೆ’

ಸುರಪುರ:   ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮರ–ಗಿಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಮರ–ಗಿಡಗಳಿಂದ ಸಕಾಲಕ್ಕೆ ಸರಿಯಾದ ಮಳೆಯಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಿವಿಲ್‌ ನ್ಯಾಯಾಧೀಶ ಎಂ. ಶಶಿಧರಗೌಡ ಅವರು ಹೇಳಿದರು.ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ನೂತನ ನ್ಯಾಯಾಲಯ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.ಮನುಷ್ಯ ಸ್ವಾರ್ಥದ ಬೆನ್ನು ಹತ್ತಿ ಅರಣ್ಯ ನಾಶದಲ್ಲಿ ತೊಡಗಿದ್ದಾನೆ. ಮರಗಿಡಗಳನ್ನು ಕಡಿದು ಮನೆ ನಿರ್ಮಾಣದಲ್ಲಿ ತೊಡಗಿದ್ದಾನೆ. ಆಧುನಿಕತೆ ಹೆಸರಲ್ಲಿ ಪರಿಸರ ವಿನಾಶವಾಗುತ್ತಿದೆ. ಇದರಿಂದ ಭವಿಷ್ಯದ ದಿನಗಳಲ್ಲಿ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ ಎಂದು

ಅವರು ಎಚ್ಚರಿಸಿದರು.ಸಸಿಗಳನ್ನು ನೆಟ್ಟ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಅವು ಹಾಳಾಗದಂತೆ ಎಚ್ಚರಿಕೆ ವಹಿಸಿ ಬೆಳೆಸುವುದು ಅಷ್ಟೆ ಪ್ರಮುಖ. ಈ ನಿಟ್ಟಿನಲ್ಲಿ ಮರಗಳ ಬೆಳವಣಿಗೆ, ರಕ್ಷಣೆ ಮತ್ತು ಅದರಿಂದಾಗುವ ಸಾಧಕ–ಭಾಧಕಗಳ ಬಗ್ಗೆ ಅರಣ್ಯ ಇಲಾಖೆ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.ವಕೀಲರ ಸಂಘದ ಉಪಾಧ್ಯಕ್ಷೆ ಚವ್ಹಾಲಕ್ಷ್ಮಿ ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಅಧಿಕಾರಿ ಟಿ.ವಿ. ಸಗ್ಗಾವಿ, ನಂದನಗೌಡ

ಪಾಟೀಲ, ಜಿ.ಎಸ್. ಪಾಟೀಲ, ಎಸ್. ಸಿದ್ರಾಮಪ್ಪ, ದೇವಿಂದ್ರಪ್ಪ ಬೇವಿನಕಟ್ಟಿ, ಶಿವಾನಂದ ಅವಂಟಿ, ಮಾನಪ್ಪ ಕವಡಿಮಟ್ಟಿ, ಶಾಂತಗೌಡ ಪಾಟೀಲ, ವಿಶ್ವಾಮಿತ್ರ ಕಟ್ಟಿಮನಿ, ಚನ್ನಪ್ಪ ಹೂಗಾರ ಇದ್ದರು. ವೆಂಕಟೇಶ ನಾಯಕ ಸ್ವಾಗತಿಸಿದರು. ವಿ.ಎಸ್. ಬೈಚಬಾಳ, ನಿರೂಪಿಸಿದರು. ಸಂಗಣ್ಣ ಗುಳಗಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.