‘ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ’

7

‘ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ’

Published:
Updated:

ಆನೇಕಲ್‌: ‘ಸರ್ಕಾರದ ಎಲ್ಲ ಇಲಾಖೆ ಗಳು ಪರಿಸರ ಸಂರಕ್ಷಣೆಯ ಕಾನೂನು ಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಟಿ.ದಯಾನಂದ ರೆಡ್ಡಿ ನುಡಿದರು.ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಓಜೋನ್‌ ಪದರ ಸಂರಕ್ಷಣಾ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಕೈಗಾರಿಕಾ ಪ್ರದೇಶಗಳಿಗೆ ಅನು ಮೋದನೆ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಸಿರು ವಲಯಕ್ಕೆ ಸ್ಥಳ ಮೀಸಲಿಡಬೇಕು. ಇಲ್ಲವಾದಲ್ಲಿ ಕೈಗಾ ರಿಕಾ ಪ್ರದೇಶಕೆ್ಕ ಅನುಮೋದನೆ ನೀಡ ಬಾರದು’ ಎಂದು ಅವರು ಹೇಳಿದರು.‘ಕೈಗಾರಿಕೆಗಳಿಂದ ಶೇ.14ರಷ್ಟು ಮಾಲಿನ್ಯ ಉಂಟಾದರೆ ರಸೆ್ತ ಸಾರಿಗೆ ಯಿಂದ ಶೇ.42ರಷ್ಟು ಮಾಲಿನ್ಯ ಉಂಟಾಗುತ್ತಿದೆ. ಆದ್ದರಿಂದ ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿಗೆ ಸಮರ್ಪಕ ಯೋಜನೆಗಳನ್ನು ರೂಪಿಸಬೇಕು. ಸಾರ್ವಜನಿಕರೂ ಮಾಲಿನ್ಯ ನಿಯಂತ್ರಣ ಕ್ರಮಗಳನು್ನ ಅಳವಡಿಸಿ ಕೊಳ್ಳಬೇಕು’ ಎಂದರು.ಪರಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾ್ರದೇಶಿಕ ಅಧಿಕಾರಿ ವೈ.ಜಿ.ಯತೀಶ್‌ ಮಾತನಾಡಿ, ‘ಕೈಗಾರಿ ಕೆಗಳು ಮಾಲಿನ್ಯ ನಿಯಂತ್ರಣದ ಮುನ್ನೆ ಚೆ್ಚರಿಕಾ ಕ್ರಮ ಕೈಗೊಳ್ಳಬೇಕು. ಕೈಗಾರಿ ಕೆಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ರೂಪಿಸಿಕೊಳ್ಳಬೇಕು’ ಎಂದು ಅವರು ಹೇಳದರು.‘ವಿಶ್ವಮಟ್ಟದಲ್ಲಿ ಓಜೋನ್‌ ಪದರ ಶಿಥಿಲವಾಗುವುದನ್ನು ತಡೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಅದರ ಅಂಗವಾಗಿಯೇ ಅಂತರ ರಾಷ್ಟ್ರೀಯ ಓಜೋನ್‌ ಪದರ

ಸಂರಕ್ಷಣಾ ದಿನಾಚರಣೆ ಆಚರಿಸ ಲಾಗುತ್ತಿದೆ’ ಎಂದರು.ವೀರಸಂದ್ರ ಕೈಗಾರಿಕಾ ಎಸೇ್ಟಟ್‌ನ ಉಪಾಧ್ಯಕ್ಷ ಮಹೇಶ್‌, ಸಣ್ಣ ಕೈಗಾರಿಕೆಗಳ ಸಂಘದ ಪ್ರಕಾಶಂ, ಮಾಲಿನ್ಯ ನಿಯಂತ್ರಣ ಮಂಡಳಿಯ ಜಿ.ಎಸ್. ಮಂಜುನಾಥ್‌, ಕೆ.ಎಂ.ರಾಜು, ಬೊಮ್ಮ ಸಂದ್ರ ಕೈಗಾರಿಕ ಮಾಲೀಕರ ಸಂಘದ ಕಾರ್ಯದರ್ಶಿ ಆರ್‌.ನರೇಂದ್ರ ಕುಮಾರ್‌ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry