ಭಾನುವಾರ, ಜೂನ್ 20, 2021
20 °C

‘ಪಾಲ್‌ ವಾಕರ್‌ ಜೊತೆ ನಟಿಸಿದ್ದು ಅವಿಸ್ಮರಣೀಯ’:ಡೇವಿಡ್ ಬೆಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವರ್ಷ ನವಂಬರ್‌ನಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಹಾಲಿವುಡ್‌ ನಟ ಪಾಲ್‌ ವಾಕರ್‌ ಅವರೊಂದಿಗೆ ಅವರ ಕೊನೆಯ ಚಿತ್ರ ‘ಬ್ರಿಕ್‌ ಮ್ಯಾನ್ಶನ್ಸ್’ನಲ್ಲಿ ನಟಿಸಿದ್ದು ಅವಿಸ್ಮರಣೀಯ ಅನುಭವ ಎಂದು ನಟ ಡೇವಿಡ್‌ ಬೆಲ್ಲೆ ಹೇಳಿದ್ದಾರೆ. ಡೇವಿಡ್‌, ಸ್ಟ್ರೀಟ್‌ ಅ್ಯಕ್ಷನ್‌ ಸ್ಟಂಟ್‌ ‘ಪಾರ್ಕ್‌ ಅವರ್‌’ನ ಪಿತಾಮಹ ಎಂದೇ ಖ್ಯಾತರಾದ ನಟ.‘ಪಾಲ್‌ ವಾಕರ್ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಚಿತ್ರ ಜೀವನದ ಮರೆಯಲಾಗದ ಅನುಭವ. ‘ಬ್ರಿಕ್‌ ಮ್ಯಾನ್ಶನ್ಸ್’ ಚಿತ್ರ ಕೂಡ ಮರೆಯಲಾಗದ್ದು. ಪಾಲ್‌ ವಾಕರ್‌ ಒಬ್ಬ ಒಳ್ಳೆಯ ವ್ಯಕ್ತಿ, ಅದ್ಭುತ ನಟ’ ಎಂದು ವಾಕರ್‌ ಅವರನ್ನು ಡೇವಿಡ್‌ ಸ್ಮರಿಸಿದ್ದಾರೆ. ಕ್ಯಾಮಿಲ್ಲೆ ನಿರ್ದೇಶನದ ಇಂಗ್ಲಿಷ್‌ ಚಿತ್ರ ‘ಬ್ರಿಕ್‌ ಮ್ಯಾನ್ಶನ್ಸ್’ ಇದೇ ವರ್ಷ ಏಪ್ರಿಲ್‌ 25ರಂದು ಬಿಡುಗಡೆಯಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.