‘ಪೃಥ್ವಿ–2’: ಪರೀಕ್ಷಾರ್ಥ ಉಡಾವಣೆ ಯಶಸ್ವಿ

7

‘ಪೃಥ್ವಿ–2’: ಪರೀಕ್ಷಾರ್ಥ ಉಡಾವಣೆ ಯಶಸ್ವಿ

Published:
Updated:

ಬಾಲಸೋರ್/ಒಡಿಶಾ (ಪಿಟಿಐ): ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯ­ಬಲ್ಲ, ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿ­ಪಡಿಸ­ಲಾದ ಭಾರತದ ಮಹತ್ವಾಕಾಂಕ್ಷಿ ಕ್ಷಿಪಣಿ ‘ಪೃಥ್ವಿ–2’ನ ಪರೀಕ್ಷಾರ್ಥ ಉಡಾವಣೆ ಮಂಗಳವಾರ ಯಶಸ್ವಿಯಾಗಿ ಜರುಗಿತು.ಇಲ್ಲಿನ ಚಾಂದಿಪುರದ ಸಮಗ್ರ ಪರೀಕ್ಷಾ ವಲಯದ ಸಂಚಾರಿ ಉಡ್ಡ­ಯನ ಸಂಕೀರ್ಣ–3ರಿಂದ ಬೆಳಿಗ್ಗೆ 9.48ಕ್ಕೆ “ಪೃಥ್ವಿ- 2’ಅನ್ನು ಉಡಾಯಿ­ಸಲಾಯಿತು.

ಭೂಮಿ­ಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿ  350 ಕಿ.ಮೀ. ಕ್ರಮಿಸಬಲ್ಲದು. 500ರಿಂದ 1000 ಕೆ.ಜಿ.ಯ ಸಿಡಿತಲೆ­ಗ­ಳನ್ನು -ಹೊತ್ತೊಯ್ಯಬಲ್ಲ ಸಾಮರ್ಥ್ಯ­ವುಳ್ಳ ‘ಪೃಥ್ವಿ–2’, ಎರಡು ಇಂಜಿನ್‌­ಗ­ಳನ್ನು ಹೊಂದಿದ್ದು, ಅಭ್ಯಾಸ ಕಾರ್ಯಾ­ಚ­ರ­ಣೆಗೆ ಬಳಸಬಹು­ದಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry