‘ಪೊರಕೆ’ ಚಿಹ್ನೆ: ಎಎಪಿಗೆ ನೋಟಿಸ್‌

7

‘ಪೊರಕೆ’ ಚಿಹ್ನೆ: ಎಎಪಿಗೆ ನೋಟಿಸ್‌

Published:
Updated:

ಲಖನೌ (ಐಎಎನ್‌ಎಸ್‌): ‘ಪೊರಕೆ’ ಚಿಹ್ನೆಗೆ ಸಂಬಂಧಿಸಿ ಆಮ್‌್ ಆದ್ಮಿ ಪಕ್ಷಕ್ಕೆ (ಎಎಪಿ) ಅಲಹಾಬಾದ್‌ ಹೈಕೋರ್ಟ್‌ ಗುರುವಾರ ನೋಟಿಸ್‌ ನೀಡಿದೆ.ಎಎಪಿ ‘ಪೊರಕೆ’ ಚಿಹ್ನೆ ಪ್ರಶ್ನಿಸಿ ನೈತಿಕ್‌ ಪಕ್ಷವು ಹೈಕೋರ್ಟ್‌ಗೆ ಕಳೆದ ವಾರ ಮನವಿ ಸಲ್ಲಿಸಿತ್ತು. ‘ನಮ್ಮ ಪಕ್ಷಕ್ಕೆ ಈ ಮೊದಲು ಈ ಚಿಹ್ನೆ ನೀಡಲಾಗಿತ್ತು. ಇದೇ ಚಿಹ್ನೆ ಇಟ್ಟುಕೊಂಡು 2012ರಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೆವು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೂಡ ನಮಗೆ ಇದೇ ಚಿಹ್ನೆ ನೀಡಬೇಕು’ ಎಂದು ಪಕ್ಷವು ಕೇಳಿಕೊಂಡಿತ್ತು.‘ನೈತಿಕ್‌ ಪಕ್ಷದ ಮನವಿಗೆ ಮೂರು ವಾರಗಳಲ್ಲಿ ಉತ್ತರಿಸಬೇಕು’ ಎಂದು ನ್ಯಾಯಮೂರ್ತಿಗಳಾದ ರಾಜೀವ್‌ ಶರ್ಮಾ ಹಾಗೂ ಮಹೇಂದ್ರ ದಯಾಳ್‌  ಅವರಿದ್ದ  ಲಖನೌಪೀಠ  ಎಎಪಿಗೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry