‘ಪೌರಕಾರ್ಮಿಕರಿಗೆ ಎಲ್ಲ ಸೌಲಭ್ಯ’

7

‘ಪೌರಕಾರ್ಮಿಕರಿಗೆ ಎಲ್ಲ ಸೌಲಭ್ಯ’

Published:
Updated:

ಗದಗ: ಪೌರ ಕಾರ್ಮಿಕರ ಬೇಡಿಕೆ ಗಳನ್ನು ಹದಿನೈದು ದಿನಗಳಲ್ಲಿ ಈಡೇರಿ ಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಭರವಸೆ ನೀಡಿದರು.ಗದಗ–ಬೆಟಗೇರಿ ನಗರಸಭೆ ಹಾಗೂ ಕರ್ನಾಟಕ ಪೌರ ಸೇವಾ ನೌಕರರ ಸೇವಾ ಸಂಘದ ಆಶ್ರಯದಲ್ಲಿ ಸೋಮ ವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಿಸಿಲು, ಚಳಿ, ಮಳೆಯನ್ನದೇ ನಗರದ ಸ್ವಚ್ಛತೆ ಕಾಪಾಡುವಲ್ಲಿ ಶ್ರಮಿ ಸುತ್ತಿರುವ ಪೌರ ಕಾರ್ಮಿಕರಿಗೆ ಆರೋಗ್ಯದ ದೃಷ್ಠಿಯಿಂದ ಕಾಲಿಗೆ ಶೂ,  ಕೈಗವಸು ಹಾಗೂ ಇತರೆ ಸೌಲಭ್ಯಗಳನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು. ಪೌರ ಕಾರ್ಮಿಕರ ನಿರ್ಮಲ ಸೇವಾ ಮನೋಭಾವದಿಂದ ನಗರವನ್ನು ಸ್ವಚ್ಛ ವಾಗಿ ಕಾಣಲು ಸಾಧ್ಯ. ತಮ್ಮ ಕಾಯಕ ದಲ್ಲಿ ಕಿಳರೀಮೆ ತೋರದೆ ನಗರದ ಸ್ವಚ್ಚತೆ ಕಾಪಾಡಿಕೊಂಡು ಮಾದರಿ ನಗರವನ್ನಾಗಿ ಮಾಡಲು ಪೌರ ಕಾರ್ಮಿಕರು ಸಹಕರಿಸಬೇಕು ಎಂದರು.ಉಪವಿಭಾಗಧಿಕಾರಿ ಐ.ಜಿ.ಗದ್ಯಾಲ ಮಾತನಾಡಿ,  ಕುಟುಂಬ ಮತ್ತು ಆರೋಗ್ಯವನ್ನು ಲೆಕ್ಕಿಸದೇ ನಗರವನ್ನು ನಮ್ಮ ಮನೆ ಎಂದು ಭಾವಿಸಿ ಉತ್ತಮ ಪರಿಸರಕ್ಕಾಗಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಸೇವಾ ಭದ್ರತೆ, ಅವಶ್ಯಕ ಸಲಕರಣೆಗಳನ್ನು ಪೂರೈಸಲಾಗುವುದು ಎಂದರು.ಪೌರಾಯುಕ್ತ ಎಂ.ಬಿ.ನಡುವಿನ­ಮನಿ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಲ್.ಜಿ.ಪತ್ತಾರ, ಪರಿಸರ ಅಭಿಯಂತರ ಬಿ.ಎಸ್. ಮಧುಸೂದನ, ಪೌರಸೇವಾ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ವಿರೂಪಾಕ್ಷಪ್ಪ ರಾಮಗಿರಿ, ಜಿಲ್ಲಾಧ್ಷಕ್ಷ ರಾಮು ಆಸಂಗಿ, ತಾಯಪ್ಪ ಗೌಡರ, ಯಲ್ಲಪ್ಪ ಬಳ್ಳಾರಿ, ವೆಂಕಟೇಶ ರಾಮಗೀರಿ, ಸುರೇಶ ಕಲ್ಮನಿ ಹಾಜರಿದ್ದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಅವರು ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧಿ, ಹಾಗೂ ಡಾ. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಅತ್ಯುತ್ತಮ ಪೌರಕಾರ್ಮಿಕರು ಹಾಗೂ ಪೌರಕಾರ್ಮಿಕರ ಪ್ರತಿಭಾ ವಂತ ಮಕ್ಕಳನ್ನು ಸನ್ಮಾನಿ ಸಲಾಯಿತು. ಹಮೇಶ ಹಾಗೂ ಸಂಗಡಿಗರು  ಕ್ರಾಂತಿ ಗೀತೆ ಹಾಡಿದರು. ಸಿದ್ದು ಹುಣಸಿಮರದ  ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry