ಮಂಗಳವಾರ, ಜೂನ್ 22, 2021
22 °C
ಮೂಡಿಗೆರೆ: ಪೌಷ್ಟಿಕ ಆಹಾರ ಮಾಹಿತಿ ಕಾರ್ಯಾಗಾರ

‘ಪೌಷ್ಟಿಕ ಸ್ಥಳೀಯ ಉತ್ಪನ್ನ ಮಾಹಿತಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಪೌಷ್ಟಿಕಾಂಶ­ಯುಕ್ತ ಆಹಾರ ಉತ್ಪನ್ನಗಳ ಬಗ್ಗೆ ಸೂಕ್ತ ಮಾಹಿತಿ ಪ್ರಚಾರ ಮಾಡಬೇಕಾದ ಅಗತ್ಯ ಇದೆ ಎಂದು ತಾಲ್ಲೂಕು ಶಿಶು ಅಧಿಕಾರಿ ಬಿ.ಎಚ್‌. ಕೃಷ್ಣಪ್ಪ ಅಭಿಪ್ರಾಯ ಪಟ್ಟರು.ಪಟ್ಟಣದ ಶಿಶು ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಎರಡು ದಿನಗಳ ಕಾಲ ಅಂಗನವಾಡಿ ಶಿಕ್ಷಕಕಿಯರಿಗಾಗಿ ಏರ್ಪಡಿಸ­ಲಾಗಿದ್ದ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಾ­ಗಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವ ಪಪ್ಪಾಯಿ, ಸೀಬೆಯಂತಹ ಹಣ್ಣುಗಳು, ತಾಜಾ ಸೊಪ್ಪುಗಳು, ಹಿತ್ತಲಿನಲ್ಲಿ ಬೆಲೆಯುವ ತಾಜಾ ತರಕಾರಿಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿದ್ದು, ಇದನ್ನು ಬಳಕೆ ಮಾಡುವ ಕ್ರಮಗಳನ್ನು ಗ್ರಾಮೀಣ ಜನರಿಗೆ ಸೂಕ್ತವಾಗಿ ತಿಳಿಸಿಕೊಡಬೇಕಿದೆ. ಅಲ್ಲದೇ ತಾವು ದಿನ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳು ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳದಂತೆ ಸಂರಕ್ಷಿಸಬೇಕಾದ ವಿಧಾನಗಳು, ಪೌಷ್ಟಿಕಾಂಶ­ಯುಕ್ತವಾಗಿ ತಯಾರಿಸ ಬೇಕಾದ ವಿಧಾನ--­­ಗಳನ್ನು ಜನತೆಗೆ ತಿಳಿಸಕೊಡಬೇಕಾಗಿದೆ ಎಂದರು.ಮಂಗಳೂರಿನ ಪೌಷ್ಟಿಕ ಆಹಾರ ತರಬೇತಿ ನಿಗಮದ ಅಧಿಕಾರಿ ಶಿವದರ್ಶನ್‌ ತ್ರಿಪಾಠಿ ಮಾತನಾಡಿ, ಭಾರತದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಬೆಳೆಗಳು ಬಹಳಷ್ಟಿದ್ದರೂ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿನ ಸಮಸ್ಯೆ­ಯಿಂದಾಗಿ ಇಂದಿಗೂ ಭಾರತದ ಮಕ್ಕಳು ಪೌಷ್ಟಿಕಾಂಶದ ಕೊರೆತೆಯಿಂದ ಬಳಲುತ್ತಿರುವ ನಿದರ್ಶನಗಳಿವೆ. ಎಲ್ಲಾ ಮಕ್ಕಳಿಗೂ ಪೌಷ್ಟಿಕಾಂಶ­ಯುಕ್ತ ಆಹಾರ ದೊರೆಯಲು, ಶಿಕ್ಷಿತರು ಪೌಷ್ಟಿಕಾಂಶಯುಕ್ತ ಆಹಾರ ತಯಾರಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ದಿನನಿತ್ಯ ಬಳಸುವ ಆಹಾರಗಳನ್ನೇ ಹೇಗೆ ಪೌಷ್ಟಿಕಾಂಶಯುಕ್ತವಾಗಿ ತಯಾರಿಸಬೇಕೆಂಬುದರ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿದರೆ, ಪೌಷ್ಟಿಕಾಂಶದ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಸ್ಥಳಿಯವಾಗಿ ಲಭ್ಯವಾ­ಗುವ ಪಪ್ಪಾಯಿ, ಸೊಪ್ಪು, ತರಕಾರಿ, ಹಣ್ಣುಗ­ಳಿಂದ ಪೌಷ್ಟಿಕ ಆಹಾರ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು. ಅಲ್ಲದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ, ಗರ್ಭಿಣಿ­ಯರು ಮತ್ತು ಬಾಣಂತಿಯರ ಹಾರೈಕೆ, ಹಾಲುಣಿಸುವ ಕ್ರಮಗಳ ಬಗ್ಗೆ ಕಾರ್ಯಾಗಾರ­ದಲ್ಲಿ ಮಾಹಿತಿ ನೀಡಲಾಯಿತು. ಶಿಶು ಅಭಿವೃದ್ಧಿ ಇಲಾಖೆಯ ಮಾಲತಿ, ರೇಷ್ಮಾ, ಶಿಲ್ಪಾ, ಭಾರತಿ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.