ಬುಧವಾರ, ಜನವರಿ 29, 2020
24 °C

‘ಪ್ರಜಾಪ್ರಭುತ್ವ ಗೌರವಿಸಿದ ಒಡೆಯರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್  ಅರಸೊತ್ತಿಗೆ ಮತ್ತು ಪ್ರಜಾಪ್ರಭತ್ವವನ್ನು ಏಕಕಾಲದಲ್ಲಿ ಗೌರವಿತವಾಗಿ ಒಪ್ಪಿಕೊಂಡಿದ್ದರು ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್ ತಿಳಿಸಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಾಗರಿಕ ಹಿತರಕ್ಷಣ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಯದು ವಂಶದ ಕೊನೆಯ ಕುಡಿ ಒಡೆಯರ್ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ ಒಡೆಯರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ನಾಗರಿಕ ಹಿತರಕ್ಷಣ ಸಮಿತಿಯ ಅಧ್ಯಕ್ಷ ಎಲೆ ಮಂಜು, ಗೌರವಾಧ್ಯಕ್ಷರಾದ ಹೆಮ್ಮಿಗೆ ಮಹದೇವ್, ಪ.ಪಂ. ಮುಖ್ಯಾಧಿಕಾರಿ ಪಂಕಜರೆಡ್ಡಿಮುಖಂಡರಾದ ತಾತನ ಹಳ್ಳಿ ಈರಯ್ಯ ಪಿ. ಮಹದೇವ್, ತಾ.ಪಂ.ಮಾಜಿ ಸದಸ್ಯ ಎಸ್.ರಾಮು, ಅಜೀಜ್ ಅಹಮದ್ ಷಫಿ, ಭೀಮ, ಪೆಪ್ಸಿಕುಮಾರ್, ಅಶೋಕ್ ಕುಮಾರ್ ಗೌಡ ಕಾಂತರಾಜು, ಅಬ್ಬೂರು ಪುಟ್ಟರಾಜು, ರವಿ ಪಾಟಿಲ್, ದೊರೆ ಕೆರೆ ನಾಗೇಂದ್ರ ಹಾಜರಿದ್ದರು.

ಪ್ರತಿಕ್ರಿಯಿಸಿ (+)