‘ಪ್ರಶಸ್ತಿ ನಿರೀಕ್ಷಿಸಿರಲಿಲ್ಲ’

7

‘ಪ್ರಶಸ್ತಿ ನಿರೀಕ್ಷಿಸಿರಲಿಲ್ಲ’

Published:
Updated:

ಧಾರವಾಡ: ‘ಈ ಹಿಂದೆ ಪತಿ ಏಣಗಿ ಬಾಳಪ್ಪ ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದಾಗ ಬಹಳ ಖುಷಿ ಪಟ್ಟಿದ್ದೆ. ಮುಂದೆ ಅದು  ನನಗೂ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ.  ಖುಷಿಯಾಗಿದೆ. ಇದು ವೃತ್ತಿರಂಗ­ಭೂಮಿಯ ಪ್ರತಿಯೊಬ್ಬ ಕಲಾವಿದೆಗೂ ಬಂದಿರುವ ಪ್ರಶಸ್ತಿ’ ಎಂದು ಲಕ್ಷ್ಮೀ­ಬಾಯಿ ಏಣಗಿ  ಪ್ರತಿಕ್ರಿಯಿ­ಸಿದ್ದಾರೆ.ವೃತ್ತಿ ರಂಗಭೂಮಿಗೆ ಶ್ರೀಮಂತಿಕೆ, ಘನತೆ ತಂದುಕೊಟ್ಟ ಗುಬ್ಬಿ ವೀರಣ್ಣ  ಕಂಪನಿಯಲ್ಲಿ ಬಾಲ್ಯನಟಿಯಾಗಿದ್ದ ಲಕ್ಷ್ಮಿ, ಇಂದು 86ರ ವಯೋವೃದ್ಧೆ.ಮೂಲತಃ ಬಳ್ಳಾರಿ ಜಿಲ್ಲೆಯ­ವರಾದ ವಿರೂಪಾಕ್ಷಪ್ಪ, ಗುಬ್ಬಿ ಕಂಪನಿ­ಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸು­ತ್ತಿದ್ದರು.ಅಲ್ಲಿಂದಲೇ ಅವರ ಮಗಳು ಲಕ್ಷ್ಮಿ ಅವರಿಗೆ ರಂಗ­ಭೂಮಿ­ಯ ನಂಟು ಆರಂಭ­­ವಾಗಿದ್ದು. 7 ವರ್ಷ­­ದವರಿ­ರು­ವಾಗಲೇ ಅಭಿ­ನಯ ಪ್ರಾರಂ­ಭಿಸಿದ ಅವರದು ವೃತ್ತಿ ರಂಗ­ಭೂಮಿಯಲ್ಲಿ ಸುದಿೀರ್ಘ ಪಯಣ.‘ಸ್ಕೂಲ್‌ ಮಾಸ್ಟರ್‌‘, ‘ಪಠಾಣಿ ಪಾಶಾ’, ‘ಜಗಜ್ಯೋತಿ ಬಸವಣ್ಣ’, ‘ಕಿತ್ತೂರ ಚನ್ನಮ್ಮ’ ಅವರು ಅಭಿನ­ಯಿಸಿದ ಪ್ರಮುಖ ನಾಟಕಗಳು. ಇಂದಿಗೂ ಬಾಳಪ್ಪನವರನ್ನು ‘ಬಸ­ವಣ್ಣ’ ಪಾತ್ರದ ಮೂಲಕ ಗುರುತಿ­ಸಿದರೆ, ಲಕ್ಷ್ಮಿಬಾಯಿ ಅವರ ‘ಕಿತ್ತೂರ ಚನ್ನಮ್ಮ’ ಪಾತ್ರವನ್ನು ನೆನಪಿಸಿ­ಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry