ಶುಕ್ರವಾರ, ಜನವರಿ 24, 2020
20 °C

‘ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮನುಷ್ಯ ಶಾಂತಿ-– ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು ಎಂಬುದಕ್ಕೆ ಏಸು ಕ್ರಿಸ್ತ, ಮಹಮ್ಮದ್‌ ಪೈಗಂಬರ್‌, ಬುದ್ಧ, ಮಹಾವೀರ, ಬಸವಣ್ಣ ಹಾಗೂ ಅನೇಕ ಸಮಾಜ ಸುಧಾರಕರು ನಿದರ್ಶನರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಹೇಳಿದರು.ನಗರದ ಸೇಂಟ್‌ ಮೇರಿ ಸಭಾಂಗಣ­ದಲ್ಲಿ ಅಖಿಲ ಕರ್ನಾಟಕ ಕ್ರಿಶ್ಚಿಯನ್‌ ಒಕ್ಕೂಟ ವೇದಿಕೆಯು ಭಾನುವಾರ ಏರ್ಪ­ಡಿಸಿದ್ದ ‘ಕ್ರಿಸ್ತ ಜಯಂತಿ ಆಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಾಂತಿ, ಮಾನವೀಯತೆಗಾಗಿ ಹೋರಾ­­ಡಿದ ನೆಲ್ಸನ್‌ ಮಂಡೇಲಾ ಅವರನ್ನು ಇಡೀ ಭೂ ಮಂಡಲ ಸ್ಮರಿ­ಸಿತು. ಮಹಾತ್ಮರು ಸ್ಪಷ್ಟ ಸಂದೇಶ­ಗಳನ್ನು ನೀಡಿ ಬದುಕಿನ ದಾರಿಗೆ ಬೆಳ­ಕಾಗಿ­ದ್ದಾರೆ. ಆ ಬೆಳಕಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಯಾವುದೇ ಜಾತಿ, ಧರ್ಮ ಇದ್ದರೂ ನಾವೆ­ಲ್ಲರೂ ಭಾರತೀಯರು ಎನ್ನುವ ಬೆಳಕಿನ ದೀಪ ಎಲ್ಲರ ಹೃದಯ ಮಂದಿ­ರ­ದಲ್ಲಿ ಬೆಳಗುತ್ತಿರಬೇಕು ಎಂದರು.ಸುಲಫಲ ಮಠದ ಮಹಾಂತ ಶಿವಾ­ಚಾರ್ಯ ಸ್ವಾಮೀಜಿ ಮಾತನಾಡಿ, ‘ಕ್ರಿಸ್ತ ಜಯಂತಿಯನ್ನು ಸರ್ವ­ಧರ್ಮೀಯರನ್ನು ಒಟ್ಟು­ಗೂಡಿಸಿ­ಕೊಂಡು ಆಚರಿಸುತ್ತಿ­ರುವುದು ಅನುಕರಣೀಯ. ಯೇಸು ಕ್ರಿಸ್ತರು ಮಾನವೀಯತೆಯ ಸಂದೇಶ ಸಾರಿದ್ದಾರೆ. ಅನಾದಿ ಕಾಲದಿಂದಲೂ ಅವರು ಬೈಬಲ್‌ ಮೂಲಕ ಜೀವಂತ­ವಾಗಿದ್ದಾರೆ’ ಎಂದರು.ಸಂಘಾನಂದ ಭಂತೇಜಿ, ಬಿಷಪ್‌ ರಾಬರ್ಟ್‌ ಮಿರಾಂಡ ಮಾತನಾಡಿ­ದರು. ಮಾಜಿ ಶಾಸಕಿ ಅರುಣಾ ಸಿ. ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾ­ಧ್ಯಕ್ಷೆ ಅನಿತಾ ಪ. ವಳಕೇರಿ, ರಿಜ್ವಾನಾ ರೆಹಮಾನ್‌ ಸಿದ್ದಿಕಿ,  ಪ್ರಭಾಕರ್‌,  ಸರಡಗಿ, ಅನಿಲ್‌ ರೆಡ್‌ಸನ್‌, ಸೈಮನ್ ಸೊಲೊಮೊನ್‌ ಇದ್ದರು.

ಪ್ರತಿಕ್ರಿಯಿಸಿ (+)