ಮಂಗಳವಾರ, ಜೂನ್ 15, 2021
25 °C

‘ಫಲವತ್ತತೆಗೆ ಸಾವಯವ ಕೃಷಿ ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಅಧಿಕ ಆದಾಯ ಗಳಿಸುವ ಆಸೆಗೆ ಬಿದ್ದಿರುವ ಕೃಷಿಕರು ಹೆಚ್ಚು ಇಳುವರಿ ಪಡೆಯುವ ನಿಟ್ಟಿನಲ್ಲಿ ಅತಿಯಾದ ರಸಗೊಬ್ಬರ ಬಳಕೆ­ಯಾಗಿದೆ. ಇದರ ಪರಿಣಾಮ ಬರಡಾ­ಗುತ್ತಿರುವ ಕೃಷಿ ಭೂಮಿಯಲ್ಲಿ ಫಲವತ್ತತೆ ಮರುಸ್ಥಾಪಿಸಲು ಸಾವ­ಯವ ಗೊಬ್ಬರ ಮತ್ತು ಸಹಜ ಬೇಸಾಯ ಪದ್ದತಿ ಅನಿವಾರ್ಯ ಎಂದು ಪ್ರಗತಿಪರ ಕೃಷಿಕ ಮಂಜು­ನಾಥ್‌ ಅಭಿಪ್ರಾಯಪಟ್ಟರು.ಪಟ್ಟಣ ಸಮೀಪದ ಕೊರಟೀಕೆರೆ ಗ್ರಾಮದ ಬೊಮ್ಮಲಿಂಗೇಶ್ವರ ಸಮು­ದಾಯ ಭವನದಲ್ಲಿ ಶನಿವಾರ ನಡೆದ ‘ಗ್ರಾಮೀಣ ತೋಟಗಾರಿಕಾ ಅನುಭವ’ ಕಾರ್ಯಕ್ರಮದಲ್ಲಿ ಅವರು ಮಾತ­ನಾಡಿದರು.ಕೊರಟೀಕೆರೆ ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬೊಮ್ಮ­ಲಿಂಗಪ್ಪ, ಯೂರಿಯಾ ಸೇರಿದಂತೆ ವಿವಿಧ ರಾಸಾಯಿನಿಕ ಗೊಬ್ಬರ­ದಲ್ಲಿರುವ ನೈಟ್ರೋಜನ್‌ ಅಂಶ ತೋಟ­ಗಾರಿಕಾ ಬೆಳೆಯ ಬೇರನ್ನು ಕೊಳೆಯಿ­ಸುವ ಅಪಾಯವಿದೆ. ಇದಕ್ಕೆ ಪರ್ಯಾ­ಯ­ವಾಗಿ ಕೊಟ್ಟಿಗೆ ಗೊಬ್ಬರದ ಜತೆಗೆ ಬೋರಾನ್‌, ಜಿಪ್ಸಂ, ಜಿಂಕ್‌ ಬಳಸುವಂತೆ ಸಲಹೆ ನೀಡಿದರು.ಕೃಷಿ ಅಧಿಕಾರಿ ಶಿವಲಿಂಗಪ್ಪ, ತೋಟಗಾರಿಕೆ ಬೆಳೆಗೆ ಅಗತ್ಯವಾದ ಕೃಷಿ ಪರಿ­ಕರ, ಹನಿ ನೀರಾವರಿಯ ವಸ್ತು­ಗಳು ರಿಯಾಯಿತಿ ದರದಲ್ಲಿ ವಿತರಣೆ­ಯಾಗುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.ಮೂಡಿಗೆರೆಯ ತೋಟಗಾರಿಕಾ ವಿಶ್ವ ವಿದ್ಯಾಲಯ ಮತ್ತು ತೋಟ­ಗಾರಿಕಾ ವಿಸ್ತರಣ ಘಟಕ, ಶಿವಮೊ­ಗ್ಗದ ಕೃಷಿ ಮತ್ತು ವಿಜ್ಞಾನಗಳ ವಿದ್ಯಾ­ಲಯ, ಅಜ್ಜಂಪುರ ರೈತ ಸಂಪರ್ಕ ಕೇಂದ್ರದ ಅಡಿ ಬರುವ ಕೊರಟೀಕೆರೆ ಮತ್ತು ನಾಗವಂಗಲ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ನಂತರ ಏರ್ಪಾಡಾಗಿದ್ದ ತೋಟಗಾರಿಕಾ ವಸ್ತು ಪ್ರದರ್ಶನವನ್ನು ರೈತರು ವೀಕ್ಷಿಸಿ, ಮಾಹಿತಿ ಪಡೆದರು.

ಗ್ರಾಮದ ಹಿರಿಯ ನೀಲಕಂಠಪ್ಪ, ನಾಗವಂಗಲ ಗ್ರಾಮದ ಪ್ರಗತಿಪರ ರೈತ ಆನಂದಪ್ಪ, ಪ್ರಸನ್ನ, ಶಿವಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯರು, ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.