ಶನಿವಾರ, ಮಾರ್ಚ್ 6, 2021
18 °C

‘ಫೀವರ್‌’ ಹೆಚ್ಚಿಸಿದ ನಟ

ರಮೇಶ ಕೆ. Updated:

ಅಕ್ಷರ ಗಾತ್ರ : | |

‘ಫೀವರ್‌’ ಹೆಚ್ಚಿಸಿದ ನಟ

ನಿರೂಪಕ, ಗಾಯಕ ಹಾಗೂ ರೂಪದರ್ಶಿಯಾಗಿ ಹೆಸರು ಮಾಡಿದ ಇವರು ನಟರಾಗಿಯೂ ಜನಪ್ರಿಯತೆ ಪಡೆದುಕೊಂಡವರು. ಸದ್ಯ ಇವರ ಅಭಿನಯದ ಎರಡು ಸಿನಿಮಾಗಳು ತೆರೆಗೆ ಬರಬೇಕಿವೆ. ಎರಡು ಸಿನಿಮಾಗಳು ಯಶಸ್ವಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆಇವರ ಹೆಸರು ರಾಜೀವ್‌ ಖಂಡೇಲ್‌ವಾಲ್‌.  ಜೈಪುರ ಮೂಲದ ರಾಜೀವ್ ‘ಫೀವರ್‌’ ಚಿತ್ರದ ಪ್ರಚಾರಕ್ಕೆಂದು ಇತ್ತೀಚೆಗೆ ನಗರಕ್ಕೆ ಬಂದಿದ್ದರು. ದೆಹಲಿ ಮೂಲದ ಪ್ರೊಡಕ್ಷನ್‌ ಹೌಸ್‌  ಮೂಲಕ ರಾಜೀವ್‌ ರೂಪದರ್ಶಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದರು.1998ರಲ್ಲಿ ‘ಬಾನ್‌ಫೂಲ್‌’ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಹಲವು ಕಾರ್ಯಕ್ರಮಗಳಿಗೆ ನಿರೂಪಕರಾಗಿಯೂ ಗಮನ ಸೆಳೆದವರು. ಜನಪ್ರಿಯತೆ ಹೆಚ್ಚಾದಂತೆ ಸಿನಿಮಾಗಳಲ್ಲೂ ಅವಕಾಶಗಳು ಬರತೊಡಗಿದವು.2008ರಲ್ಲಿ ‘ಅಮೀರ್‌’ ಚಿತ್ರದ ಮೂಲಕ ರಾಜೀವ್‌ ಬಾಲಿವುಡ್‌ಗೆ ಪ್ರವೇಶ ಮಾಡಿದರು. ‘ಸೈತಾನ್‌’ ‘ಸೌಂಡ್‌ಟ್ರ್ಯಾಕ್‌’, ‘ವಿಲ್ ಯೂ ಮ್ಯಾರಿ ಮೀ’, ‘ಟೇಬಲ್‌ ನಂ21’, ‘ಸಾಮ್ರಾಟ್‌ ಆ್ಯಂಡ್‌ ಕಂಪೆನಿ’, ‘ಸಾಲ್ಟ್‌ಬ್ರಿಡ್ಜ್‌’ ಚಿತ್ರಗಳಲ್ಲಿ ನಟಿಸಿದರು.ಜ್ಯೋತಿ ಕಪೂರ್ ದಾಸ್ ನಿರ್ದೇಶನದ ‘ಅಭಿ ನಹೀ ಥೊ ಕಭಿ ನಹೀ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.  ರಾಜೀವ್‌ ಝವೇರಿ ನಿರ್ದೇಶನದ ‘ಫೀವರ್‌’ ನಿನ್ನೆ (ಆ.5) ತೆರೆ ಕಂಡಿದೆ. ರಾಜೀವ್‌ ಖಂಡೇಲ್‌ವಾಲ್‌ ಅವರೊಂದಿಗೆ ನಡೆಸಿದ ಸಂದರ್ಶನದ ಅಕ್ಷರರೂಪ ಇಲ್ಲಿದೆ.* ಕಿರುತೆರೆ ಹಾಗೂ  ಹಿರಿತೆರೆ ಎರಡರಲ್ಲೂ ಕೆಲಸ ಮಾಡಿದ್ದೀರಿ, ಯಾವ ಕ್ಷೇತ್ರ ಹೆಚ್ಚು ಖುಷಿ ಕೊಟ್ಟಿದೆ?

ಎರಡೂ ಕ್ಷೇತ್ರಗಳು ಖುಷಿ ನೀಡಿವೆ, ಮುಖ್ಯವಾಗಿ ಹೇಳಲೇಬೇಕಾದ ಮಾತೆಂದರೆ ನನಗೆ ಮಾಧ್ಯಮ ಮುಖ್ಯ ಅಲ್ಲ. ಪ್ರಾಜೆಕ್ಟ್‌– ವಸ್ತು– ವಿಷಯ ಮುಖ್ಯ. ಹಾಗಾಗಿ ಯಾವ ಕ್ಷೇತ್ರದ ಪ್ರಾಜೆಕ್ಟ್‌ ಮಹತ್ವದ್ದು ಎಂಬುದನ್ನು ಗಮನಿಸಿ, ಆಯ್ಕೆ ಮಾಡಿಕೊಳ್ಳುತ್ತೇನೆ.* ನಿಮ್ಮ ತಂದೆ ಸೈನ್ಯದಲ್ಲಿದ್ದವರು, ನಿಮಗೆ ಸೈನಿಕ ಆಗಬೇಕು ಎನಿಸಲಿಲ್ಲವೆ?

ಚಿಕ್ಕಂದಿನಿಂದಲೂ ಸಿನಿಮಾ ನಟ ಆಗಬೇಕೆಂದು ಕನಸು ಕಂಡಿದ್ದೆ. ಪದವಿ ಮುಗಿದ ಮೇಲೆ ಒಮ್ಮೆ ಸೈನ್ಯಕ್ಕೆ ಸೇರಲು ಪ್ರಯತ್ನಪಟ್ಟೆ. ಅರ್ಜಿಯನ್ನೂ ಹಾಕಿದ್ದೆ. ಒಂದು ದಿನ ತಡವಾಗಿ ಅರ್ಜಿ ಸಲ್ಲಿಸಿದ್ದ ಕಾರಣ, ಆ ಪ್ರಯತ್ನ ವಿಫಲವಾಯಿತು. ಅಲ್ಲಿಂದ  ನನ್ನ ಬದುಕಿನ ದಿಕ್ಕನೇ ಬದಲಿಸಿಕೊಂಡೆ.* ನಿಮ್ಮ ಅಭಿನಯದ ಯಾವ ಸಿನಿಮಾ  ಹೆಚ್ಚು ಖುಷಿ ನೀಡಿದೆ?

ಮೊದಲನೇ ಸಿನಿಮಾ ‘ಅಮೀರ್’ ಹೆಚ್ಚು ಖುಷಿ ಕೊಟ್ಟಿದೆ. ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡ ಆ ಕ್ಷಣ ವಿಶೇಷ ಅನ್ನಿಸುತ್ತದೆ.* ಬೆಂಗಳೂರಿನ  ಬಗ್ಗೆ ಏನು ಹೇಳುತ್ತೀರಿ?

ನನ್ನ ಸಿನಿಮಾಗಳ ಪ್ರಚಾರಕ್ಕಾಗಿ ಬಹಳಷ್ಟು ಬಾರಿ ಇಲ್ಲಿಗೆ ಬಂದಿದ್ದೇನೆ. ಸಿನಿಮಾಗೆ ಬರುವುದಕ್ಕೂ ಮೊದಲು ಜಾಹೀರಾತು ಮಾಡುವಾಗ ಬರುತ್ತಿದ್ದೆ. ರಾಜೀವ್‌ ಮೆನನ್‌ ಅವರ ಜೊತೆ ಕೆಲಸ ಮಾಡಿದ್ದೇನೆ. ಆಗ ಇಲ್ಲಿಯೇ ಉಳಿದುಕೊಳ್ಳುತ್ತಿದ್ದೆ. ಶ್ಯಾವಿಗೆ ಬಹಳ ಇಷ್ಟವಾದ ತಿನಿಸು.* ನಿಮ್ಮ ಫಿಟ್‌ನೆಸ್‌ ರಹಸ್ಯವೇನು?

ಬೇರೆಯವರಿಗಾಗಿ ಫಿಟ್‌ನೆಸ್‌ ಕಾಯ್ದುಕೊಳ್ಳಬಾರದು, ನಮಗಾಗಿ  ವರ್ಕೌಟ್‌ ಮಾಡಬೇಕು. ಬಹಳ ಕಾಲ ಆರೋಗ್ಯವಂತರಅಗಿ ಬದುಕಲು ಫಿಟ್‌ನೆಸ್‌ ಕಾಯ್ದುಕೊಳ್ಳಬೇಕು. ಜಿಮ್‌ನಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ದೇಹವನ್ನು ಸಧೃಡವಾಗಿ ಇಟ್ಟುಕೊಂಡಿದ್ದೇನೆ.* ‘ಫೀವರ್‌’ ಸಿನಿಮಾದ ಚಿತ್ರೀಕರಣ ವೇಳೆ ನಿಮಗೆ ಕಷ್ಟವೆನಿಸಿದ ಸಂದರ್ಭ?

ಬಹುತೇಕ ಸಿನಿಮಾ ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಣವಾಗಿದೆ. ಮೂರು ಶೆಡ್ಯೂಲ್‌ನಲ್ಲಿ ಚಿತ್ರೀಕರಣವಾಗಿದೆ. ಅಲ್ಲಿನ ಕೊರೆಯುವ ಚಳಿ ತಡೆಯುವುದು ಕಷ್ಟವಾಗಿತ್ತು. ಈ ಚಿತ್ರದಲ್ಲಿ ಬಹಳಷ್ಟು ಜನ ನೋಡಿರದ ಸ್ಥಳಗಳಿವೆ. 16 ನಗರಗಳಲ್ಲಿ ಸಿನಿಮಾ ಮಾಡಿದ್ದಾರೆ. ಪ್ರಯಾಣವೂ ಕಷ್ಟಕರವಾಗಿತ್ತು. ನಮ್ಮ ನಿರ್ದೇಶಕರೇ ಸಿನಿಮಾ ಎಡಿಟಿಂಗ್‌ ಮಾಡಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.* ಬಾಲಿವುಡ್‌ನಲ್ಲಿ ಈವರೆಗೆ ಸಾಕಷ್ಟು ಸಸ್ಪೆನ್ಸ್ ಸಿನಿಮಾಗಳು ಬಂದಿವೆ. ಜನ ಈ ಸಿನಿಮಾದಿಂದ ಏನು ನಿರೀಕ್ಷಿಸಬಹುದು?

ಇದು ಇತರೆ ಸಸ್ಪೆನ್ಸ್‌ ಸಿನಿಮಾಗಳಿಗಿಂತ ವಿಭಿನ್ನ. ಕತೆ ಹೆಣೆದಿರುವ ರೀತಿಯೇ ಭಿನ್ನವಾಗಿದೆ. ಆರ್ಮಿನ್‌ ಸಲೇಮ್‌ ಎಂಬ ಸುಪಾರಿ ಹಂತಕನಿಗೆ ಅಪಘಾತದಿಂದಾಗಿ ಹಳೆಯದು ಮರೆತು ಹೋಗುತ್ತೆ. ಆದರೆ ಮಾಡಿದ ಅಪರಾಧ ಮತ್ತು ಹೆಸರಷ್ಟೇ ನೆನಪಿರುತ್ತದೆ. ಕೊರಿಯಾಗ್ರಫಿ ಅದ್ಭುತವಾಗಿದೆ. ಒಟ್ಟಾರೆ ಜನ ನೋಡಲೇಬೇಕಾದ ಸಿನಿಮಾ.* ಸಿನಿಮಾದ ದೃಶ್ಯವೊಂದರಲ್ಲಿ ಇಮ್ರಾನ್‌ ಹಶ್ಮಿ ಥರ ಮುತ್ತು ಕೊಟ್ಟಿದ್ದೀರಲ್ಲ?

ಹಾಗೇನೂ ಇಲ್ಲ, ಅದು ಸಿನಿಮಾದ ಒಂದು ಭಾಗವಾಗಿತ್ತು ಅಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.