ಭಾನುವಾರ, ಡಿಸೆಂಬರ್ 15, 2019
26 °C

‘ಬಾಂಧವ್ಯ ಉಳಿಸಿಕೊಳ್ಳುವುದರಲ್ಲಿಯೇ ಹಿರಿತನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಾಂಧವ್ಯ ಉಳಿಸಿಕೊಳ್ಳುವುದರಲ್ಲಿಯೇ ಹಿರಿತನ’

ಬೆಂಗಳೂರು: ‘ಮಲೆನಾಡಿನ ಜತೆಗೆ ಬೆಸೆದ ಬಾಂಧವ್ಯವನ್ನು ಕೊನೆಯವರೆಗೂ ಉಳಿಸಿಕೊಂಡು ಬರುವುದರಲ್ಲಿ ಹಿರಿತನವಿದೆ’ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಮಲೆನಾಡು ಮಿತ್ರವೃಂದವು ನಗರದಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವಾರ್ಷಿಕೋತ್ಸವ ಹಾಗೂ ‘ಮಲೆನಾಡು ಮಿತ್ರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಮಲೆನಾಡಿನ ಅನೇಕ ಜನರು ವಾಸವಾಗಿದ್ದಾರೆ. ಇಲ್ಲಿ ಬಂದು ಅವರ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅವರ ಪೋಷಕರು ತಮ್ಮ ಮಲೆನಾಡು ಬಿಟ್ಟು ಬರದೆ, ಇವರು ಅಲ್ಲಿಗೆ ಹೋಗಲಾಗದೆ, ಬದುಕು ಮತ್ತು ಸಂಬಂಧಗಳು ಇಂದು ಅತಂತ್ರವಾಗುತ್ತಿವೆ’ ಎಂದರು.‘ಮಲೆನಾಡಿನ ಬದುಕು ಲಾಟರಿ  ಉದ್ಯಮ ಇದ್ದ ಹಾಗೆ. ಅಡಿಕೆಗೆ ಬೆಲೆ ಬಂದರೆ ಮಾತ್ರ ಅಲ್ಲಿನ ರೈತರ ಬದುಕು ಹಸನಾಗುತ್ತದೆ. ಈ ವರ್ಷ ಬೆಳೆ ಬಂದಿತ್ತು. ಬೆಲೆಯೂ ಇತ್ತು. ಆದರೆ, ಮೂರು ತಿಂಗಳಿನ ಸತತ ಮಳೆಯಿಂದ ಬೆಳೆಯೆಲ್ಲವೂ ನಾಶವಾಗಿದೆ’ ಎಂದರು.ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿ, ‘ಮಲೆನಾಡು ಮಿತ್ರ ವೃಂದ’ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ’ ಎಂದರು.

ಪ್ರತಿಕ್ರಿಯಿಸಿ (+)