‘ಬಾರಿ ಮೊತ್ತದ ಸ್ಫೋಟಕ ವಸ್ತು ಜಪ್ತಿ’

7

‘ಬಾರಿ ಮೊತ್ತದ ಸ್ಫೋಟಕ ವಸ್ತು ಜಪ್ತಿ’

Published:
Updated:

ರಾಯಚೂರು: ಇಲ್ಲಿಗೆ ಸಮೀಪದ ಮನ್ಸಲಾಪುರ –ಶಕ್ತಿನಗರ ನಡುವಿನ ಬೈಪಾಸ್‌ ರಸ್ತೆಯಲ್ಲಿ ಮಹೀಂದ್ರಾ ಕಂಟೇನರ್‌ ವಾಹನದಲ್ಲಿ 1,18,320 ರೂಪಾಯಿ  ಮೊತ್ತದ ಸ್ಪೋಟಕ ವಸ್ತುಗಳು ಹಾಗೂ ಅಮೋನಿಯಂ ನೈಟ್ರೇಟ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿಕಾರಿ ಎಂ.ಎನ್‌ ನಾಗರಾಜ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನದ ಹಿಂದೆ ಈ ದಾಳಿ ನಡೆಸಲಾಗಿದೆ. ರಾತ್ರಿ ಹೊತ್ತು ಬೈಪಾಸ್‌ ರಸ್ತೆಯಲ್ಲಿ ಮಹೀಂದ್ರಾ ಕಂಟೇನರ್‌ ವಾಹನ ನಿಂತಿದ್ದನ್ನು ಕಂಡ ಪೊಲೀಸರು ವಿಚಾರಣೆ ನಡೆಸಿದಾಗ ಆ ವಾಹನದಲ್ಲಿ ಸ್ಪೋಟಕ ಸಾಗಿಸು­ತ್ತಿದ್ದುದು ಗೊತ್ತಾಗಿದೆ ಎಂದು ಹೇಳಿದರು.ರಾಜಸ್ತಾನ್‌ದ ಪಟಿಯಾಂಕ ಗ್ರಾಮದ ಸರವಣ್‌ ಎಂಬ ಚಾಲಕ ಈ ವಾಹನದಲ್ಲಿ ಸ್ಪೋಟಕ ಸಾಗಿಸುತ್ತಿದ್ದ. ವಾಹನದಲ್ಲಿ 500 ಕೆ.ಜಿ ಅಮೋನಿಯಂ ನೈಟ್ರೇಟ್‌, 25 ಬಾಕ್ಸ್‌ನಲ್ಲಿ 500 ಜಿಲಿಟಿನ್‌ ಕಡ್ಡಿಗಳು, 5 ರಟ್ಟಿನ ಬಾಕ್ಸ್‌ನಲ್ಲಿ 73 ಸಾವಿರ ಬೆಲೆಬಾಳುವ ಡಿಟೋನೆಟರ್ಸ್ ಸಾಗಿಸಲಾಗುತ್ತಿದ್ದುದು ತಪಾಸಣೆ ಸಂದಭರ್ದಲ್ಲಿ ಗೊತ್ತಾಗಿದ್ದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.ಸಿಂದಗಿಯ ಕೃಷ್ಣ ಗೋಪಾಲ್‌ ಮುಂದ್ರಾ, ಲಕ್ಷ್ಮಣ ಅಶೋಕ ಬೆರವಾಡಗಿ, ರಾಜು ಮುಂದ್ರಾ  ಅವರು ಈ ವಸ್ತುಗಳನ್ನು ತನಗೆ ಈ ವಸ್ತು ಕೊಟ್ಟು ರಾಯಚೂರು ಹತ್ತಿರದ ಮಿಟ್ಟಿ ಮಲ್ಕಾಪುರ ಗ್ರಾಮದ ಈಶ್ವರ­ರೆಡ್ಡಿ ಎಂಬುವವರಿಗೆ ತಲುಪಿಸಲು ಕಳುಹಿಸಿದ್ದಾಗಿ ಚಾಲಕ ಸರವಣ್‌ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿ­ಟ್ಟಿದ್ದಾನೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ­ಲಾಗಿದೆ ಎಂದು ಹೇಳಿದರು.ಪೊಲೀಸ್‌ ಅಧೀಕ್ಷಕರ ಕಚೇರಿಯ ಇನ್ಸಪೆಕ್ಟರ್‌ ಜೆ ಕರುಣೇಶಗೌಡ,  ಗ್ರಾಮೀಣ ಠಾಣೆ ಇನ್ಸಪೆಕ್ಟರ್‌  ಎಚ್‌.ಬಿ ಸಣ್ಣಮನಿ, ಸಿಬ್ಬಂದಿ ಶೇಖ ಅಬ್ದುಲ್‌, ಶೇಖರ್‌, ಹನುಮಂತ­ರಾಯ, ನಾಗರಾಜ್‌ ಅವರು ಈ ದಾಳಿ ನಡೆಸಿದ್ದಾರೆ. ಗ್ರಾಮೀಣ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ರಮೇಶ ಮೇಟಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry