ಭಾನುವಾರ, ಜನವರಿ 19, 2020
29 °C

‘ಬಿಎಸ್‌ವೈ ಬಂದರೆ ಇಬ್ಬರಿಗೂ ಲಾಭ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಬರುವುದರಿಂದ ಇಬ್ಬರಿಗೂ ಲಾಭವಾಗಲಿದೆ. ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಗಂಭೀ ರವಾಗಿ ಚಿಂತನೆ ನಡೆಸಬೇಕು ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂ ತರಾಯಪ್ಪ ಪಕ್ಷದ ಹೈಕಮಾಂಡ್‌ನ್ನು ಒತ್ತಾಯಿಸಿದರು.ಅವರು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ಬಿಜೆಪಿ ಸಂಘಟನೆ ಸಮ ಪರ್ಕವಾಗಿ ನಡೆಯುತ್ತಿದೆ. ಕ್ಷೇತ್ರದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರು ಬಿಜೆಪಿ ಸಂಘಟನೆಯಲ್ಲಿ ಸಕ್ರಿಯ ವಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಲಿದೆ’ ಎಂದರು.ತಾಲ್ಲೂಕು ಪಂಚಾಯಿತಿಯಲ್ಲಿ 12 ಜನ ಬಿಜೆಪಿ ಸದಸ್ಯರು ಆಯ್ಕೆ ಯಾಗಿದ್ದರೂ ಆಂತರಿಕ ಗೊಂದಲ ದಿಂದಾಗಿ ಅಧ್ಯಕ್ಷರ ಆಯ್ಕೆ ಚುನಾವ ಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಈ ಎಲ್ಲ ಗೊಂದಲಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಸಂಘಟಿಸಲಾಗುವುದು ಎಂದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸಿ.ನಾರಾ ಯಣಸ್ವಾಮಿ ಮಾತನಾಡಿ, ಡಿ.15 ರಂದು ಹೊಸಕೋಟೆಯಲ್ಲಿ ಗ್ರಾಮಾಂ ತರ ಜಿಲ್ಲಾಮಟ್ಟದ ‘ಏಕತಾ ಓಟ’ ನಡೆಯಲಿದೆ. ಡಿ.27 ರಂದು ದೇವ ನಹಳ್ಳಿಯಲ್ಲಿ ‘ನವ ಭಾರತ’ ಯುವ ಸಮಾವೇಶ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಆರ್‌. ಅಶ್ವತ್ಥ ನಾರಾಯಣಗೌಡ, ನಗರ ಅಧ್ಯಕ್ಷ ಶಿವಶಂಕರ್‌, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪುಷ್ಪಾ ಶಿವಶಂಕರ್‌, ಮಾಜಿ ನಗರ ಸಭೆ ಸದಸ್ಯ ಮಹದೇವ್‌, ಬಿಜೆಪಿ ಮುಖಂಡ ಆವಲಕೊಂಡಪ್ಪ, ಗೋಪಿ, ಮಹಿಳಾ ಮೋರ್ಚಾದ ಎಂ.ವಿ.ರಾಜ ಲಕ್ಷ್ಮೀ, ಉಮಾಮಹೇಶ್ವರಿ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)