‘ಬಿಗ್‌ಬಾಸ್‌’ಗೆ ಶಾರುಖ್‌ ಸ್ವಾಗತಿಸಿದ ಸಲ್ಮಾನ್

7

‘ಬಿಗ್‌ಬಾಸ್‌’ಗೆ ಶಾರುಖ್‌ ಸ್ವಾಗತಿಸಿದ ಸಲ್ಮಾನ್

Published:
Updated:

ಬಾಲಿವುಡ್‌ ಸೂಪರ್ ಸ್ಟಾರ್‌ ಸಲ್ಮಾನ್‌ ಖಾನ್‌ ತಾನು ನಡೆಸಿಕೊಡುತ್ತಿರುವ ‘ಬಿಗ್‌ ಬಾಸ್‌’ ರಿಯಾಲಿಟಿ ಶೋದಲ್ಲಿ ಭಾಗವಹಿಸುವಂತೆ ಶಾರುಖ್‌ಖಾನ್‌ಗೆ ಆಹ್ವಾನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.‘ಶಾರುಖ್‌ ಖಾನ್‌ ಬಿಗ್‌ ಬಾಸ್‌ಗೆ ಬಂದು ತನ್ನ ಚಿತ್ರಗಳ ಪ್ರಚಾರ ನಡೆಸಲು ಸ್ವಾಗತಿಸುತ್ತಿದ್ದೇನೆ. ಅವರು ಬರುತ್ತಾರೆ ಎಂಬ ನಂಬಿಗೆ ಇದೆ’ ಎಂದೂ ಸಲ್ಮಾನ್‌ ಹೇಳಿದ್ದಾರೆ.ಇತ್ತೀಚೆಗಷ್ಟೇ ಇಫ್ತಾರ್‌ ಕೂಟವೊಂದರಲ್ಲಿ ಪರಸ್ಪರ ಅಪ್ಪಿಕೊಂಡಿದ್ದು ಸಹಜವಾಗಿದ್ದರೂ, ಇದು ಸಲ್ಮಾನ್‌ ಮತ್ತು ಶಾರುಖ್‌ ನಡುವೆ ಕೆಲ ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ಶಮನವಾಗುವ ಸೂಚನೆ ಎಂದೇ ಇಬ್ಬರ ಅಭಿಮಾನಿಗಳು ನಂಬಿದ್ದರು.ಆದರೆ, ಅದಕ್ಕೆ ಪ್ರತಿಕ್ರಿಯಿಸಿದ್ದ ಸಲ್ಮಾನ್‌ ‘ಇಫ್ತಾರ್‌ ಕೂಟದಲ್ಲಿ ಅಪ್ಪಿಕೊಳ್ಳುವುದು ಮತ್ತು ಕೈಕುಲುಕುವುದು ಆಚರಣೆಯ ಒಂದು ಭಾಗವಾಗಿದೆ’ ಎಂದಿದ್ದರು. ‘ಬೇರೊಬ್ಬರನ್ನು ಮಣಿಸಬೇಕೆಂದಿದ್ದರೆ ತಮ್ಮ ಕೆಲಸದ ಮೂಲಕ ತೋರಿಸಬೇಕು’ ಎಂದೂ ಹೇಳಿದ್ದರು.ಅಂದಹಾಗೆ, ಬಿಗ್‌ಬಾಸ್‌ ವೇದಿಕೆಗೆ ಆಮೀರ್‌ ಖಾನ್‌ ಮತ್ತು ರಣಬೀರ್‌ ಕಪೂರ್‌ ಕೂಡಾ ಹೊಸ ಚಿತ್ರದೊಂದಿಗೆ ಬರುತ್ತಿದ್ದಾರೆ.

‘ಬಿಗ್‌ ಬಾಸ್‌’ನ ಏಳನೇ ಆವೃತ್ತಿ ಸೆ.15ರಿಂದ ಪ್ರಸಾರಗೊಳ್ಳುತ್ತಿದೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry