‘ಬಿಜಿಎಸ್‌ಇ’ ಮಾನ್ಯತೆ ರದ್ದು

7

‘ಬಿಜಿಎಸ್‌ಇ’ ಮಾನ್ಯತೆ ರದ್ದು

Published:
Updated:

ಬೆಂಗಳೂರು:  ಸುಮಾರು 50 ವರ್ಷ­ಗಳಷ್ಟು ಹಳೆಯದಾದ ಬೆಂಗಳೂರು ಷೇರು ವಿನಿಮಯ ಕೇಂದ್ರದ (ಬಿಜಿ­ಎಸ್‌ಇ)  ಮಾನ್ಯತೆ ಶೀಘ್ರದಲ್ಲೇ ರದ್ದು­ಗೊಳ್ಳಲಿದೆ.ಮಾನ್ಯತೆ ರದ್ದುಪಡಿಸುವ ನಿರ್ಧಾ­ರ ವನ್ನು ಶನಿವಾರ ಇಲ್ಲಿ ನಡೆದ ವಾರ್ಷಿಕ  ಸರ್ವ ಸದಸ್ಯರ ಸಭೆಯಲ್ಲಿ ತೆಗೆದು­ಕೊಳ್ಳಲಾಯಿತು.

ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳು  ಮಾನ್ಯತೆ ಉಳಿಸಿಕೊಳ್ಳಬೇ­ಕಾದರೆ ರೂ.1,000 ಕೋಟಿ ವಹಿವಾಟು ಹೊಂದಿರಬೇಕು ಎಂಬ ನಿಯಮವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಜಾರಿಗೊಳಿಸಿದೆ. ಆದರೆ, ‘ಬಿಜಿ­ಎಸ್‌ಇ’ ವಹಿವಾಟು ಕೇವಲ ರೂ.110 ಕೋಟಿಯಷ್ಟಿದ್ದು, ಮಾನ್ಯತೆ ಮುಂದುವರಿಸಿಕೊಂಡು ಹೋಗುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯತೆ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ‘ಬಿಜಿ­ಎಸ್‌ಇ’ ಮೂಲಗಳು ತಿಳಿಸಿವೆ.ಬೆಂಗಳೂರು ಷೇರು ವಿನಿಮಯ ಕೇಂದ್ರದ ಅಂಗಸಂಸ್ಥೆ ಬಿಜಿಎಸ್‌ಇ ಫೈನಾ-­ನ್ಶಿ­­ಯಲ್ಸ್ ಲಿಮಿಟೆಡ್‌ ಬ್ರೋಕಿಂಗ್‌, ಸುಮಾರು 65 ಸಾವಿರ ಹೂಡಿಕೆ­ದಾರರನ್ನು ನೋಂದಾ­ಯಿಸಿಕೊಂಡು ಚಟುವಟಿಕೆ ನಡೆಸಲು ಅನುವು ಮಾಡಿಕೊಟ್ಟಿದೆ. ಷೇರು ವಿನಿಮಯ ಕೇಂದ್ರದ ಮಾನ್ಯತೆ ರದ್ದಾದರೂ ಬಿಜಿಎಸ್‌ಇ ಫೈನಾನ್ಶಿ­ಯಲ್ಸ್‌ನಲ್ಲಿ ಸೇವೆ ನಿರಾತಂಕವಾಗಿ ಮುಂದು­ವರೆಯಲಿದೆ. ಆದ್ದರಿಂದ ಈ ಬಗ್ಗೆ ಆತಂಕ ಅನಾವಶ್ಯಕ ಎಂದೂ ‘ಬಿಜಿಎಸ್‌ಇ’ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry