ಮಂಗಳವಾರ, ಜೂನ್ 22, 2021
29 °C

‘ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಖಚಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ಭ್ರಷ್ಟಾಚಾರದ ಮೂಲಕ ಹಣ ಗಳಿಸುವುದೇ ರಾಜಕೀಯ ಉದ್ದೇಶ ಎಂದುಕೊಂಡಿರುವ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಅವರಿಗೆ ಮತದಾರರು ಎಂದು ಕಾಂಗ್ರೆಸ್‌ ಪಕ್ಷದ ಲೋಕಸಭೆ ಅಭ್ಯರ್ಥಿ ಬಿ.ವಿ.ನಾಯಕ ವಿಶ್ವಾಸ ವ್ಯಕ್ತಪಡಿಸಿದರು.ಭಾನುವಾರ ಪಟ್ಟಣದಲ್ಲಿ ನಡೆದ ಮಾನ್ವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜು ಮಾತನಾಡಿದರು.

ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಶಾಸಕ ಎ.ಪಾಪಾರೆಡ್ಡಿ ಹಾಗೂ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎ.ವಸಂತಕುಮಾತ ಮಾತನಾಡಿದರು.ಬಿಎಸ್ಆರ್‌ ಕಾಂಗ್ರೆಸ್‌ ಪಕ್ಷದ ಬಸನಗೌಡ ದದ್ದಲ, ಪುರಸಭೆ ಮಾಜಿ ಅಧ್ಯಕ್ಷ ಮಹ್ಮದ್‌ ಇಸ್ಮಾಯಿಲ್‌, ವಲಿಪಾಷ, ಇಬ್ರಾಹಿಂ ಖುರೇಷಿ ಮತ್ತಿತರರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.ಶಾಸಕ ಎ.ವೆಂಕಟೇಶ ನಾಯಕ, ಮಾಜಿ ಶಾಸಕ ರಾಯಪ್ಪ ನಾಯಕ, ಮಾಜಿ ಎಂಎಲ್‌ಸಿ ಬಸವರಾಜ ಪಾಟೀಲ್‌ ಇಟಗಿ, ಜಿಪಂ ಸದಸ್ಯರಾದ ಹನುಮೇಶ ಮದ್ಲಾಪುರ ಹಾಗೂ ಕೆ.ಅಸ್ಲಂ ಪಾಷ ಸಿರವಾರ, ಜಿಪಂ ಮಾಜಿ ಸದಸ್ಯ ಸಿದ್ರಾಮಪ್ಪ ನೀರ­ಮಾನ್ವಿ, ಪುರಸಭೆಯ ಅಧ್ಯಕ್ಷ ಸೈಯದ್‌ ನಜೀರುದ್ದೀನ್‌ ಖಾದ್ರಿ, ಮಾನ್ವಿ ಹಾಗೂ ಸಿರವಾರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಗಫೂರಸಾಬ ಮತ್ತು ಅಯ್ಯನಗೌಡ ಜಂಬಲದಿನ್ನಿ, ಮುಖಂಡ­ರಾದ ಎಂ.ಈರಣ್ಣ, ಎಚ್‌.ಹುಸೇನ್‌ ಪಾಷಾ, ಎ. ಬಾಲಸ್ವಾಮಿ ಕೊಡ್ಲಿ, ಶಿವಾ­ಜಿರಾವ್‌ ದರ್ಶನಕರ್‌, ಇಲಿ­ಯಾಸ್‌ ಖಾದ್ರಿ, ಕೆ.ಶಾಂತಪ್ಪ, ಎ.ಬಿ.ಉಪ್ಪಳಮಠ, ಬಿ.ಕೆ.ಅಮರೇಶ, ಕೃಪಾಸಾಗರ ಪಾಟೀಲ್‌, ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಗೋಪಿಕಾ ಶ್ರೀನಿವಾಸರಾವ್‌, ಡಾ.ರೋಹಿಣಿ ಮಾನ್ವಿಕರ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.