ಭಾನುವಾರ, ಡಿಸೆಂಬರ್ 8, 2019
19 °C

‘ಬೆಂಗಳೂರು ಇಷ್ಟದ ನಗರಿ’

Published:
Updated:
‘ಬೆಂಗಳೂರು ಇಷ್ಟದ ನಗರಿ’

ರ್ನಾಟಕ ಸಂಗೀತ ಗಾಯಕಿ ಬಾಂಬೆ ಜಯಶ್ರೀ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಸದಾ ರೇಷ್ಮೆ ಸೀರೆ ಉಡುವುದು, ಎಲ್ಲರೊಂದಿಗೆ ಬೆರೆಯುವುದು ಜಯಶ್ರೀ ಅವರ ವ್ಯಕ್ತಿತ್ವ. ತಮ್ಮ ಈ ಗುಣದಿಂದಾಗಿ ಎಲ್ಲರಿಗೂ ಸುಲಭವಾಗಿ ಮಾತಿಗೆ ಸಿಗುವ ಕಲಾವಿದೆ ಎನಿಸಿದ್ದಾರೆ. ‘ಮಕ್ಕಳ ಕರ್ನಾಟಕ ಸಂಗೀತ ಮೇಳ’ ಉದ್ಘಾಟನೆಗೆ ಬಂದಿದ್ದ ಅವರು, ‘ಬೆಂಗಳೂರು ನನ್ನ ಇಷ್ಟದ ನಗರದಲ್ಲೊಂದು’ ಎಂದು ಹೇಳಿ ನಗರಪ್ರೀತಿಯನ್ನು ಹೊರಹಾಕಿದರು.‘ಬಾಂಬೆ ಜಯಶ್ರೀ ಅವರಂತಹ ಖ್ಯಾತ ಗಾಯಕಿಯ ಬಳಿ ಸಂಗೀತ ಹೇಳಿಸಿಕೊಳ್ಳುವ ಭಾಗ್ಯ ನಮ್ಮದಾಗಿದೆ’ ಎಂಬುದು ಮೇಳದಲ್ಲಿ ಭಾಗವಹಿಸಿದ್ದ ಮಕ್ಕಳ ಹೆಮ್ಮೆಯ ನುಡಿ. ‘ಈ ನಗರದಲ್ಲಿ ಏನೇ ಹೊಸ ಪ್ರಯೋಗ ಮಾಡಬೇಕೆಂದರೂ ಎರಡನೆ ಯೋಚನೆಯೇ ಇಲ್ಲದೆ ಕೈಗೆತ್ತಿಕೊಳ್ಳುತ್ತೇನೆ. ಮಕ್ಕಳ ಸಂಗೀತ ಮೇಳ ಕಟ್ಟಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು.

ಬೆಂಗಳೂರು ಹೊಸ ಯೋಜನೆಗಳಿಗೆ ಬೇಗನೆ ತೆರೆದುಕೊಳ್ಳುತ್ತದೆ ಎಂದು ಕೇಳಿದ್ದೆ. ಆದರೆ ಇಲ್ಲಿನ ಯುವಕರೊಂದಿಗೆ ಚರ್ಚಿಸುವಾಗ, ತರಬೇತಿ ನೀಡುವಾಗ ಸಂಗೀತದಿಂದ ಏನನ್ನೂ ಬಯಸಬಾರದು ಎಂಬ ಅರಿವಾಯಿತು’ ಎಂಬುದು ಜಯಶ್ರೀ ಅನುಭವದ ಮಾತು.

ಜಯಶ್ರೀ ಅವರು ಹಾಡಿರುವ ‘ಲೈಫ್‌ಆಫ್ ಪೈ’ ಚಿತ್ರದ ಹಾಡು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡದ್ದು ಮಹತ್ವದ ತಿರುವು ಎಂದೇ ವ್ಯಾಖ್ಯಾನಿಸಲಾಗಿತ್ತು.

ಆದರೆ ಆ ಕುರಿತು ಜಯಶ್ರೀ ಅವರ ಪ್ರತಿಕ್ರಿಯೆ ಬೇರೆಯದೇ ಆಗಿದೆ: ಅಂತಹದ್ದೇನೂ ಆಗಿಲ್ಲ. ನನ್ನ ಬದುಕು ಸಹಜವಾಗಿಯೇ ಇದೆ. ಇತ್ತೀಚೆಗೆ ಜನ ನನ್ನನ್ನು ಸಂಬೋಧಿಸುವಾಗ ‘ಆಸ್ಕರ್ ನಾಮಿನೇಟೆಡ್ ಬಾಂಬೆ ಜಯಶ್ರೀ’ ಎಂದು ಉಲ್ಲೇಖಿಸುತ್ತಿದ್ದಾರೆ ಎಂದು ನಗುತ್ತಾರೆ. ‘ಆಸ್ಕರ್ ಪ್ರಶಸ್ತಿ ಪ್ರಕಟಗೊಂಡ ಸಂದರ್ಭದಲ್ಲಿ ಹಾಲಿವುಡ್‌ನ ಖ್ಯಾತರ ಜೊತೆ ಅಲ್ಲಿದ್ದದ್ದು ಅವಿಸ್ಮರಣೀಯ.

ಅದು ನನ್ನ ಬಾಲ್ಯದ ಕನಸು ನನಸಾದ ಕ್ಷಣ’ ಎಂದಿದ್ದಾರೆ ಜಯಶ್ರೀ. ‘ಮೆರಿಲ್ ಸ್ಟ್ರೀಪ್’ ಅಥವಾ ಸ್ಟೀಫನ್ ಸ್ಪಿಲ್ಬರ್ಗ್ ಅವರಂತಹ  ಪ್ರತಿಭಾವಂತರ ಜೊತೆ ಕಳೆದ ಕ್ಷಣ ನಿಜಕ್ಕೂ ರೋಮಾಂಚನ ಉಂಟುಮಾಡಿತ್ತು ಎಂದು ನೆನಪು ಮಾಡಿಕೊಂಡರು. ‘ಪ್ರಶಸ್ತಿಗೆ ನಾಮಕರಣವಾದ ಕ್ಷಣದಿಂದ ಘೋಷಣೆಯಾಗುವವರೆಗೂ ತುಂಬಾ ಒತ್ತಡದಲ್ಲಿದ್ದೆ.

ಇನ್ನೇನು ಪ್ರಶಸ್ತಿ ಘೋಷಿಸುತ್ತಾರೆ ಎಂಬ ಕ್ಷಣ ಹತ್ತಿರ ಬಂದಾಗ ಇಡೀ ಪ್ರೇಕ್ಷಕರು ಬೇರೆಯದೇ ಬೆಳಕಿನಲ್ಲಿ ನನ್ನತ್ತ ನೋಡುತ್ತಿದ್ದರು. ಆ ಕ್ಷಣವೇ ನನ್ನ ಸಹಜ ಬದುಕಿಗೆ ಮರಳಬೇಕು ಎನ್ನಿಸಿತ್ತು’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜಯಶ್ರೀ ಅವರ ಹೆಸರು ಪ್ರಶಸ್ತಿ ಪಟ್ಟಿಯಲ್ಲಿ ಬಾರದಿದ್ದಾಗ ನಿರಾಶೆಯಾಯಿತಂತೆ. ‘ಪ್ರಶಸ್ತಿ ಬಂದಿದ್ದರೆ ಚೆನ್ನಾಗಿತ್ತು. ಆದರೂ ಮತ್ತೊಂದು ಅವಕಾಶವಿದೆವಿದೆ ಎಂದುಕೊಂಡಿದ್ದೇನೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)