ಮಂಗಳವಾರ, ಜೂನ್ 15, 2021
21 °C

‘ಬೆಂಗಳೂರು ವಿ.ವಿ ಪರೀಕ್ಷಾ ವ್ಯವಸ್ಥೆ ಸುಧಾರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂದಿನ ಸೆಮಿಸ್ಟರ್‌ ಪರೀಕ್ಷೆಯ ವೇಳೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಫಲಿತಾಂಶ ಸಕಾಲಕ್ಕೆ ಪ್ರಕಟಿಸಲಾಗುವುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ನಿಂಗೇಗೌಡ ತಿಳಿಸಿದರು.ನೂತನ ಕುಲಸಚಿವರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಅವರು, ‘ಪರೀಕ್ಷಾ ವ್ಯವಸ್ಥೆಯನ್ನು ಆಧುನೀಕರಣ ಮಾಡಲಾಗುವುದು. ಸಾಫ್ಟ್‌ವೇರ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ತಪ್ಪುಗಳಿಲ್ಲದೆ ಮೌಲ್ಯಮಾಪನ ನಡೆಸುವಂತಾಗಲು ಉಪನ್ಯಾಸಕರಿಗೆ ತರಬೇತಿ ನೀಡಲಾಗುವುದು. ದೂರ ಶಿಕ್ಷಣ ಪರೀಕ್ಷಾ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗುವುದು’ ಎಂದರು.‘ಬೇರೆ ವಿಶ್ವವಿದ್ಯಾಲಯಕ್ಕೆ ಹೋಲಿಸಿದರೆ ಬೆಂಗಳೂರು ವಿವಿಯಲ್ಲಿ ಅತ್ಯಧಿಕ ಸಂಖ್ಯೆಯ ಉತ್ತರ ಪತ್ರಿಕೆಗಳ ಮೌಲ್ಯ­ಮಾಪನ ಮಾಡಬೇಕಿದೆ. ಬೇರೆ ವಿವಿಗಳಲ್ಲಿ 15,000 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕಿದ್ದರೆ, ಬೆಂಗ­ಳೂರು ವಿವಿಯಲ್ಲಿ ನಾಲ್ಕು ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯ­ಮಾಪನ ಮಾಡಬೇಕಿದೆ. ಮೌಲ್ಯಮಾಪನದಲ್ಲಿ ಪ್ರಸ್ತುತ ಶೇ 1 ರಷ್ಟು ತಪ್ಪುಗಳು ಆಗುತ್ತಿವೆ. ಇದನ್ನು ತಡೆ­ಗಟ್ಟಲು ಉಪನ್ಯಾಸಕರಿಗೆ ತರಬೇತಿ ನೀಡಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.