‘ಬೆನ್ನಿಹಿನ್ ಭೇಟಿಗೆ ಅವಕಾಶ ಬೇಡ’

7

‘ಬೆನ್ನಿಹಿನ್ ಭೇಟಿಗೆ ಅವಕಾಶ ಬೇಡ’

Published:
Updated:

ಬೆಂಗಳೂರು: ‘ಮತಾಂತರದ ಉದ್ದೇಶ ಹೊಂದಿರುವ ಬೆನ್ನಿಹಿನ್ ಒಬ್ಬ ಉಗ್ರ’ ಎಂದು ಸಂಶೋಧಕ ಡಾ.ಎಂ.­ಚಿದಾನಂದ ಮೂರ್ತಿ ಆರೋಪಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೂ ಧರ್ಮದ ರಕ್ಷಣೆಯೇ ನನ್ನ ಬಾಳಿನ ಗುರಿ. ಬೆನ್ನಿಹಿನ್ ಮತಾಂತರದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಧರ್ಮಗಳಿಗೆ ಧಕ್ಕೆ ತರುತ್ತಾನೆ. ಕಟ್ಟುಕತೆಗಳ ಮೂಲಕ ಜನರ ರೋಗ ರುಜಿನಗಳನ್ನು ನಾಶ ಮಾಡುತ್ತೇನೆ ಎನ್ನುವ ಆತ ಮೂಢವಾದಿ’ ಎಂದು ಆರೋಪಿಸಿದರು.‘ಭಾರತ ಸಂವಿಧಾನದಲ್ಲಿ ಮತಾಂತರಗೊಳ್ಳುವುದಕ್ಕೆ ಅವಕಾಶವಿದೆಯೇ ಹೊರತು ಮತಾಂತರಿಸುವುದಕ್ಕಲ್ಲ. ಮೂಢನಂಬಿಕೆಗಳ ವಿರುದ್ಧ ದನಿ ಎತ್ತಿರುವ ರಾಜ್ಯ ಸರ್ಕಾರ ಬೆನ್ನಿಹಿನ್‌ನ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದರು.‘ಕೊಡವರು ಹೊರಗಿನವರು ಎಂದು ಕೋ.ಚೆನ್ನಬಸಪ್ಪ ಅವರು ಬರೆದಿರುವುದು ಸರಿಯಲ್ಲ. ಅಲ್ಲದೆ ಟಿಪ್ಪು ಹಿಂದೂ ಧರ್ಮ ಪ್ರೇಮಿ ಎಂದು ಬರೆದು ಜನರ ದಾರಿತಪ್ಪಿಸುತ್ತಿದ್ದಾರೆ.  ಕೊಡವರ ಶಾಂತಿಯುತ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry