‘ಬೆಳೆ ಆಯೋಗ’ ಶೀಘ್ರ: ಭೈರೇಗೌಡ

7

‘ಬೆಳೆ ಆಯೋಗ’ ಶೀಘ್ರ: ಭೈರೇಗೌಡ

Published:
Updated:

ದಾವಣಗೆರೆ: ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ದರ ನಿಗದಿ ಮಾಡುವುದು ಸೇರಿದಂತೆ ಕೃಷಿ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಬೆಳೆ ಆಯೋಗ’ ರಚನೆಗೆ ನಿರ್ಧರಿಸಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಅಂತ್ಯದಲ್ಲಿ ಬೆಳೆ ಆಯೋಗ ರಚಿಸುವ ಮೂಲಕ ಕಾರ್ಯಸೂಚಿಯ ಸ್ಪಷ್ಟ ರೂಪುರೇಷೆ ನೀಡಲಾಗುವುದು.

ಕೃಷಿಯನ್ನು ಯಾಂತ್ರೀಕೃತ ಹಾಗೂ ಗಣಕೀಕರಣ ಮಾಡಲು ರಾಜ್ಯ ಆಯ­ವ್ಯಯದಲ್ಲಿ ರೂ 1 ಸಾವಿರ ಕೋಟಿ ಮೀಸ­ಲಿ­ಡಲಾಗಿದೆ. ರಾಜ್ಯದಲ್ಲಿ ನೀರಾ­ವರಿ ಪ್ರದೇಶ ವಿಸ್ತರಿಸಲು ಸರ್ಕಾರ ನಿರ್ಧರಿ­ಸಿದೆ. ಅದಕ್ಕಾಗಿ ಬಜೆಟ್‌ನಲ್ಲಿ ರೂ 50 ಸಾವಿರ ಕೋಟಿ ನಿಗದಿಪಡಿಸಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry