ಸೋಮವಾರ, ಮಾರ್ಚ್ 8, 2021
22 °C

‘ಬೆಳ್ಳಿ ಜಯಿಸಿದ್ದು ಖುಷಿ ನೀಡಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೆಳ್ಳಿ ಜಯಿಸಿದ್ದು ಖುಷಿ ನೀಡಿದೆ’

ಬೆಂಗಳೂರು: ‘ದೋಹಾದಲ್ಲಿ ನಡೆದ ಐಎಎಎಫ್‌ ಡೈಮಂಡ್‌ ಲೀಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದು ಖುಷಿ ನೀಡಿದೆ. ಆದರೆ, ಇನ್ನೂ ಉತ್ತಮ ಪ್ರದರ್ಶನ ತೋರಬಹುದಿತ್ತು’ ಎಂದು ಡಿಸ್ಕಸ್‌ ಎಸೆತ  ಸ್ಪರ್ಧಿ ಕರ್ನಾಟಕದ ವಿಕಾಸ್‌ ಗೌಡ ಅಭಿಪ್ರಾಯಪಟ್ಟರು.ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮುಂಬರುವ ಕಾಮನ್‌ವೆಲ್ತ್‌್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ವಿಕಾಸ್‌ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ 30 ವರ್ಷದ ವಿಕಾಸ್‌ 63.23 ಮೀಟರ್‌ ದೂರ ಡಿಸ್ಕ್‌್ ಎಸೆದು ಬೆಳ್ಳಿ ಗೆದ್ದಿದ್ದರು.

‘ದೋಹಾದಲ್ಲಿ ಪದಕ ಜಯಿಸಿದ್ದು ವಿಶ್ವಾಸ ಹೆಚ್ಚಿಸಿದೆ. ಮುಂದಿನ ದಿನ ಗಳಲ್ಲಿ ನನ್ನ ಪ್ರದರ್ಶನ ದಲ್ಲಿ ಇನ್ನಷ್ಟು ಸುಧಾ ರಣೆ ಮಾಡಿಕೊಳ್ಳುತ್ತೇನೆ’ ಎಂದರು.ನಿಮ್ಮ ಜೀವನದ ಗುರಿ ಯೇನು ಎಂದು ಪ್ರಶ್ನಿಸಿ ದಾಗ ‘ನಿಶ್ಚಿತ ಗುರಿ ಇಟ್ಟು ಕೊಳ್ಳುವುದು ನನಗೆ ಇಷ್ಟವಿಲ್ಲ. ಪ್ರತಿ ಸಲವೂ ನನ್ನ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳ ಬೇಕೆಂದು ಬಯಸುತ್ತೇನೆ’ ಎಂದರು.ಮೈಸೂರಿನ ವಿಕಾಸ್‌ 2010ರ ನವದೆಹಲಿ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಮತ್ತು ಅದೇ ವರ್ಷ ಚೀನಾದ ಗುವಾಂಗ್ ಜೌನಲ್ಲಿ ಜರುಗಿದ ಏಷ್ಯಾ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದರು. ಅವರೀಗ ಅಮೆರಿಕದಲ್ಲಿ ಜಾನ್‌ ಗೋಡಿನಾ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.