ಭಾನುವಾರ, ಡಿಸೆಂಬರ್ 8, 2019
25 °C

‘ಬೆಸ್ಟ್ ಆಫ್ ಆರ್.ಕೆ.ಲಕ್ಷ್ಮಣ್’ ಇಂದಿನಿಂದ

Published:
Updated:
‘ಬೆಸ್ಟ್ ಆಫ್ ಆರ್.ಕೆ.ಲಕ್ಷ್ಮಣ್’ ಇಂದಿನಿಂದ

ವಿಶ್ವಮಾನ್ಯ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ನಗರದಲ್ಲಿ ನಾಳೆ (ಶನಿವಾರ) ಆರಂಭವಾಗಲಿದೆ. ‘ಬೆಸ್ಟ್ ಆಫ್ ಆರ್.ಕೆ. ಲಕ್ಷ್ಮಣ್’ ಹೆಸರಿನ ಈ ಪ್ರದರ್ಶನದಲ್ಲಿ ಅತ್ಯುತ್ತಮವೆನ್ನಬಹುದಾದ ರಾಜಕೀಯ ವ್ಯಂಗ್ಯಚಿತ್ರ, ಪಾಕೆಟ್ ವ್ಯಂಗ್ಯಚಿತ್ರಗಳೂ ಸೇರಿದಂತೆ ಇತರ ವಸ್ತು/ವಿಷಯಾಧರಿತ ವ್ಯಂಗ್ಯಚಿತ್ರಗಳು ಇರುತ್ತವೆ.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಹಮ್ಮಿಕೊಂಡಿರುವ ಪ್ರದರ್ಶನ ಅಕ್ಟೋಬರ್ ಐದರವರೆಗೂ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ವೀಕ್ಷಣೆಗೆ ಲಭ್ಯ.ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ.1, ಮಿಡ್‌ಫೊರ್ಡ್ ಹೌಸ್, ಟ್ರಿನಿಟಿ ವೃತ್ತ, ಮಹಾತ್ಮ ಗಾಂಧಿ ರಸ್ತೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99800 91428.

ಪ್ರತಿಕ್ರಿಯಿಸಿ (+)