‘ಬೇಶರಮ್’ನಲ್ಲಿ ಕಪೂರ್ ಕುಟುಂಬ

6

‘ಬೇಶರಮ್’ನಲ್ಲಿ ಕಪೂರ್ ಕುಟುಂಬ

Published:
Updated:

‘ಬೇಶರಮ್‌’ ಚಿತ್ರದಲ್ಲಿ ರಿಷಿ ಕಪೂರ್‌, ಪತ್ನಿ ನೀತು ಕಪೂರ್‌ ಹಾಗೂ ಮಗ ರಣಬೀರ್‌ ಕಪೂರ್‌ನೊಂದಿಗೆ ನಟಿಸಿದ್ದಾರೆ. ಇದೇ ಮೊದಲ ಸಲ ಸಿನಿ ಕುಟುಂಬವೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಈ ಚಿತ್ರದ ವಿಶೇಷ.ನೀತು ಸಿಂಗ್‌ ತಮ್ಮ ಮಗ ರಣಬೀರ್‌ ಜೊತೆಗೆ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮಗನ ವೈವಿಧ್ಯಮಯ ಪಾತ್ರಗಳನ್ನು ನೀತು ಮುಕ್ತವಾಗಿ ಹೊಗಳುತ್ತಿದ್ದಾರೆ.‘ನನ್ನ ಮಗನ ಕೆಲಸ ನೋಡಿದರೆ ಸಂತಸವಾಗುತ್ತದೆ. ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿರುವುದನ್ನು ನೋಡಲು ಹೆಮ್ಮೆಯೆನಿಸುತ್ತದೆ’ ಎಂದು ನೀತು ಸಿಂಗ್‌ ‘ಕೌನ್‌ ಬನೇಗಾ ಕರೋಡ್‌ಪತಿ–7’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.‘ರಾಕ್‌ಸ್ಟಾರ್‌’, ‘ಬರ್ಫಿ’ ಇದೀಗ

‘ಬೇಶರಮ್‌’ನಂತಹ ಚಿತ್ರಗಳಲ್ಲಿ ಪಾತ್ರ ನಿರ್ವಹಿಸುವುದು ಅಭಿನಯ ಕೌಶಲವನ್ನು ಸಾಣೆಹಿಡಿದಂತೆ ಆಗುತ್ತದೆ. ಇದು ರಣ್‌ಬೀರ್‌ ಭವಿಷ್ಯಕ್ಕೆ  ಒಳಿತನ್ನೇ ಮಾಡುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ‘ವೇಕ್‌–ಅಪ್‌ –ಸಿದ್‌’, ‘ಯೇ ಜವಾನಿ ಹೈ ದಿವಾನಿ’, ‘ಬರ್ಫಿ’ಯಂಥ ಪಾತ್ರಗಳು ತಮಗೂ ಖುಷಿ ನೀಡಿದವು ಎಂದು ಅಮ್ಮನೊಂದಿಗೆ ಧ್ವನಿಗೂಡಿಸುವ ರಣ್‌ಬೀರ್‌ಗೆ ‘ಕೌನ್‌ಬನೇಗಾ ಕರೋಡ್‌ಪತಿ’ಯಂಥ ಕಾರ್ಯಕ್ರಮ ನಿರ್ವಹಿಸುವ ಆಸೆಯಂತೆ. ‘ಇವಿನ್ನೂ ನನ್ನ ಆರಂಭದ ದಿನಗಳು.   ಬಾಲಿವುಡ್‌ನಲ್ಲಿ ಪಯಣಿಸಬೇಕಾದ ಹಾದಿ ಇನ್ನೂ ಇದೆ. ಅವಕಾಶ ಸಿಕ್ಕಲ್ಲಿ ಅಮಿತ್‌ಜಿ ಅವರಂತೆ ಕೆಬಿಸಿಯಂಥ ಕಾರ್ಯಕ್ರಮ ನಿರ್ವಹಿಸಲು ಇಷ್ಟಪಡುವೆ’ ಎಂದಿರುವ ರಣಬೀರ್‌ಗೆ ಸಲ್ಮಾನ್‌ಖಾನ್‌ ನಡೆಸಿಕೊಡುವ ಬಿಗ್‌ಬಾಸ್‌ ಸಹ ಇಷ್ಟದ ಕಾರ್ಯಕ್ರಮ. ಟೀವಿಯಲ್ಲಿಯೂ ಮಿಂಚಬೇಕು ಎನ್ನುವ ಆಸೆ ಅವರಿಗಿದೆ.ನೀತು ಸಿಂಗ್‌ ಜೊತೆಗೆ ‘ಕೆಬಿಸಿ7’ರಲ್ಲಿ ತಮ್ಮ ‘ಬೇಶರಮ್‌’ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ರಣಬೀರ್‌ಸಿಂಗ್‌ಗೆ ಅಭಿನವ್‌ ಕಶ್ಯಪ್‌ ಅವರ ಈ ಚಿತ್ರ ಅನನ್ಯ ಅನುಭವ ನೀಡಿದೆಯಂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry