ಬುಧವಾರ, ಜನವರಿ 29, 2020
23 °C

‘ಬ್ಯಾಂಕ್‌ಗಳು ಸೋಲಾರ್‌ಗೆ ಸಬ್ಸಿಡಿ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸೋಲಾರ್ ಗೃಹ ಬಳಕೆ ಸಾಲವನ್ನು ಆದ್ಯತೆ ಎಂಬುದಾಗಿ ಪರಿಗಣಿಸಿ ಗ್ರಾಹಕರು ಸಬ್ಸಿಡಿ ಮೂಲಕ ಪಡೆದುಕೊಳ್ಳಲು ಬ್ಯಾಂಕುಗಳು ನೆರವಾಗಬೇಕು ಎಂದು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಮಾಲಿನಿ.ಎಸ್. ಸುವರ್ಣ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಬಾರ್ಡ್ ವತಿಯಿಂದ ಸೋಲಾರ್ ಗೃಹ ಬಳಕೆ ದೀಪಗಳು ಮತ್ತು ಸೋಲಾರ್ ವಾಟರ್ ಹೀಟರ್‌ಗಳಿಗೆ ಜವಾಹರ್‌ಲಾಲ್ ನೆಹರೂ ನ್ಯಾಷನಲ್ ಸೋಲಾರ್ ಯೋಜನೆಯಡಿ ಬ್ಯಾಂಕುಗಳಲ್ಲಿರುವ ಸಬ್ಸಿಡಿ ಯೋಜನೆಯ ಕುರಿತು ವಾಣಿಜ್ಯ ಬ್ಯಾಂಕುಗಳ ವ್ಯವಸ್ಥಾಪಕರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

 

ಜಿಲ್ಲಾ ಪಂಚಾಯ್ತಿ ಸಿಇಒ  ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ನಬಾರ್ಡ್ ಕರ್ನಾಟಕದ ಪ್ರಬಂಧಕಿ ಸುರೇಖಾ ಮಾಳ್ಕೇಡ್, ಪಿಕೆಜಿಬಿಯ ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರಪ್ಪ ಹಾಜರಿದ್ದರು.ಸೆಲ್ಕೋ ಸೋಲಾರ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಮಂಜುನಾಥ್ ಬಾಗ್ವತ್ ಮತ್ತು ಸೆಲ್ಕೋ ಕನ್ಸಲ್ಟೆಂಟ್ ಬಿ. ಸತ್ಯನಾರಾಯಣ ಅವರು ಸೌರಶಕ್ತಿಯ ವಿವಿಧ ರೀತಿಯ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)