‘ಭಕ್ತಿ ಶ್ರೀಮಂತಿಕೆ ಬೆಳೆಸಿಕೊಳ್ಳಿ’

7

‘ಭಕ್ತಿ ಶ್ರೀಮಂತಿಕೆ ಬೆಳೆಸಿಕೊಳ್ಳಿ’

Published:
Updated:

ವಿಜಾಪುರ: ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ ಮತ್ತು ಅಗ್ನಿ ಪೂಜೆ ಕಾರ್ಯಕ್ರಮ ಜರುಗಿದವು. ಸಮಾರಂಭ ಉದ್ಘಾಟಿಸಿದ ಮಾನವ ಹಕ್ಕುಗಳ ಕಲ್ಯಾಣ ಮಂಡ ಳಿಯ ಅಧ್ಯಕ್ಷ ಹಾಸಿಂಪೀರ್ ವಾಲೀ ಕಾರ, ಮಾನವ ಜನ್ಮ ಸಾರ್ಥಕ ವಾಗಲು ಭಕ್ತಿ ಸೇವೆ ಅವಶ್ಯ. ಭಕ್ತಿ ಯಿಂದ ಮುಕ್ತಿ ದೊರಕುತ್ತದೆ. ತೃಪ್ತಿ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಮಾನವ ಕುಲ ಭಕ್ತಿ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಪಾಟೀಲ (ಶೇಗುಣಸಿ), ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಚಂದ್ರಶೇಖರ ಗುರುಸ್ವಾಮಿ ಮಾತನಾಡಿದರು. ಕೆ.ಜಿ. ದೇಸಾಯಿ, ಎಚ್.ಬಿ. ಹುಕ್ಕೇರಿ, ರಮೇಶ ದೇಸಾಯಿ, ಶೇಖಪ್ಪ ಕೊಪ್ಪದ, ವಿಶ್ವನಾಥ ಬೀಳೂರ, ಉಮಾಕಾಂತ ತಡಾಕೆ, ಹನುಮಂತ ಹುಕ್ಕೇರಿ, ರಾಜು ಕಂಬಾಗಿ  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry