ಮಂಗಳವಾರ, ಜೂನ್ 22, 2021
27 °C

‘ಭವಿಷ್ಯದಲ್ಲಿ 4ಜಿ, ಝಿಗ್‌ಬೀ ತಂತ್ರಜ್ಞಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಂದಿನ ದಿನಗಳಲ್ಲಿ 4ಜಿ, ಝಿಗ್‌ ಬೀ ಹಾಗೂ ನಿಸ್ತಂತು ಆ್ಯಂಟೆನಾ ತಂತ್ರಜ್ಞಾನವು ವಿದ್ಯುನ್ಮಾನ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿವೆ ಎಂದು ಗುಲ್ಬರ್ಗ ವಿವಿ ಯುಎಸ್‌ಐಸಿ (ವಿಶ್ವವಿ ದ್ಯಾಲಯದ ವಿಜ್ಞಾನ ಉಪ ಕರಣಾ ಕೇಂದ್ರ) ವಿಭಾಗದ ಮುಖ್ಯಸ್ಥೆ ಡಾ. ವಾಣಿ ಆರ್‌.ಎಂ. ಭವಿಷ್ಯ ನುಡಿದರು.ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ‘ವಿದ್ಯುನ್ಮಾನ ಮೇಳ’ (ಎಲೆಕ್ಟ್ರಾನಿಕ್ಸ್‌ ಫೇರ್‌)ದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.ಕುಟುಂಬ ಆರೋಗ್ಯ ಹಾಗೂ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ನಿಸ್ತಂತು ತಂತ್ರಜ್ಞಾನವು ಪ್ರಮುಖ ಪಾತ್ರ ನಿರ್ವಹಿಸಲಿದೆ. ಆ ಮೂಲಕ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯ. ನ್ಯಾನೋ ತಂತ್ರಜ್ಞಾನ ಹಾಗೂ ಬಹುಸಂಕೇತ ಪ್ರೊಸೆಸರ್‌ಗಳ ಬಳಕೆಯು ವಿವಿಧ ಕ್ಷೇತ್ರ ಗಳಲ್ಲಿ ಅಭಿವೃದ್ಧಿಗೆ ಕಾರಣವಾಗಲಿವೆ ಎಂದರು.ಆಧುನಿಕ ಸಕಲ ಸೌಲಭ್ಯಗಳನ್ನು ಹೊಂದಿದ ‘ಡಿಜಿಟಲ್ ಮನೆ’ಯು ಮನುಷ್ಯನ ವಾಸ್ತವ್ಯ ಕೇಂದ್ರವಾಗಲಿದೆ. ದಿನ ಬಳಕೆಗೆ ಬೇಕಾದ ಎಲ್ಲ ತಂತ್ರಜ್ಞಾನ ಸೌಕರ್ಯಗಳನ್ನು ಮನುಷ್ಯರು ಅಲ್ಲಿಯೇ ಪಡೆಬಹುದು ಎಂದರು.ಟ್ಯೂಬ್‌ನಿಂದ ಆರಂಭಗೊಂಡ ವಿದ್ಯುನ್ಮಾನ ತಂತ್ರಜ್ಞಾನ ಕ್ಷೇತ್ರವು  ಘನ ಸ್ಥಿತಿ(solid state), ಪ್ರೊಸೆಸರ್‌, ನಿಸ್ತಂತು ಮೂಲಕ ಅಭಿವೃದ್ಧಿ ಹೊಂದಿ ಪ್ರಸ್ತುತ 3ಜಿ ಕಾಲ ಘಟ್ಟದಲ್ಲಿದೆ ಎಂದ ಅವರು, ಯಾವುದೇ ತಂತ್ರಜ್ಞಾನವು ಮನುಕುಲದ ಶ್ರೇಯಸ್ಸಿಗೆ, ಸಾಮಾನ್ಯ ಮನುಷ್ಯನ ಜೀವನ ಮಟ್ಟ ವೃದ್ಧಿಗೆ ಬಳಕೆಯಾದಾಗ ಮಾತ್ರ ಸಾರ್ಥಕ ಎಂದರು.ನಗರದ ಹೈ.ಕ ಶಿಕ್ಷಣ ಸಂಸ್ಥೆಯ ಮಹಿಳಾ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಪ್ರೊ. ಎನ್‌.ಜಿ. ಪಾಟೀಲ್‌ ಮಾತನಾಡಿ, ಪ್ರತಿ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ ವಿಜ್ಞಾನಿಗಳ ಕೊಡುಗೆಗೆ ಸಮಾನಾಗಿ ಅದನ್ನು ಅಭಿವೃದ್ಧಿ ಪಡಿ ಸಿದ ಸಾವಿರಾರು ತಂತ್ರಜ್ಞರ ಕೊಡುಗೆ ಇದೆ ಎಂದು ಅವರು ಹೇಳಿದರು.ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಎನ್‌.ಸಿ. ಲಕ್ಷ್ಮೀನಾರಾಯಣ, ಶಿಕ್ಷಣ ಅಧಿಕಾರಿ ಆರ್‌. ವೆಂಕಟೇಶ್ವರು, ಸರ್ಕಾರಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಎಸ್‌.ಎಸ್‌. ಜೇವರ್ಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.