ಶುಕ್ರವಾರ, ಫೆಬ್ರವರಿ 26, 2021
30 °C

‘ಭಾರತೀಯರಿಗೆ ಸಂಗೀತಗಾರನಿಗಿಂತ ನಟನೇ ಶ್ರೇಷ್ಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾರತೀಯರಿಗೆ ಸಂಗೀತಗಾರನಿಗಿಂತ ನಟನೇ ಶ್ರೇಷ್ಠ’

‘ಪಾಣಿ ದಾ’ ಹಾಡು ಕೇಳಿ ತಲೆದೂಗದವರಿಲ್ಲ. ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕು ಎನ್ನುವ ಬಯಕೆ ಹುಟ್ಟುಹಾಕಿದ ಈ ಹಾಡನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿ, ಹಾಡಿ ಆ ಚಿತ್ರದಲ್ಲಿ ನಟನೆಯನ್ನೂ ಮಾಡಿ ಬಹುಮುಖ ಪ್ರತಿಭೆ ಮೆರೆದವರು ಆಯುಷ್ಮಾನ್‌ ಖುರಾನಾ.ಭಾರತೀಯ ಮನಸ್ಥಿತಿಯಲ್ಲಿ ಸಂಗೀತಗಾರ ಎಷ್ಟೇ ಪ್ರತಿಭಾವಂತನಾದರೂ ಆತನಿಗೆ ಬಾಲಿವುಡ್‌ ನಟನಷ್ಟು ಪ್ರಾಮುಖ್ಯತೆ, ಜನಪ್ರಿಯತೆ ದಕ್ಕುವುದೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆಯುಷ್ಮಾನ್‌ ಗಾಯಕರಷ್ಟೇ ಅಲ್ಲ ನಟರಾಗಿಯೂ ತೆರೆ ಹಂಚಿಕೊಂಡವರು.‘ಸಂಗೀತಗಾರನಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಆತನ ಜನಪ್ರಿಯತೆ ಕಡಿಮೆಯೇ. ಆದರೆ ಪಾಶ್ಚಾತ್ಯ ದೇಶಗಳಲ್ಲಿ  ಕಲಾವಿದನಿಗೆ ಸಿಗುವಷ್ಟು ಪ್ರೋತ್ಸಾಹ ಭಾರತದಲ್ಲಿ ಸಿಗುತ್ತಿಲ್ಲ. ಎಷ್ಟೇ ಉತ್ತಮ ಹಾಡುಗಾರನಾಗಿದ್ದರೂ ಆತನಿಗೆ ನಟನ ನಂತರದ ಸ್ಥಾನವೇ ಸಿಗುತ್ತದೆ. ನಟನಿಗಿಂತ ಹೆಚ್ಚಿಗೆ ಜನಪ್ರಿಯತೆ ಸಿಗದಿದ್ದರೂ ಸರಿಸಮನಾಗಿಯಾದರೂ ಗೌರವ ಸಿಗಬೇಕು’ ಎಂದು ತಮ್ಮ ಮನಸ್ಸಿನ ಅಸಮಾಧಾನವನ್ನು, ನೋವನ್ನು ಹೊರಹಾಕಿದ್ದಾರೆ ಆಯುಷ್ಮಾನ್‌.ಭಾರತದಲ್ಲಿ ಕ್ರಿಕೆಟ್‌ ಹಾಗೂ ಸಿನಿಮಾ ಮನರಂಜನಾ ಲೋಕದ ಜನಪ್ರಿಯ ಕ್ಷೇತ್ರಗಳು. ಆದರೆ ಕಾಲ ಬದಲಾದಂತೆ ವ್ಯಕ್ತಿಯ ಆಯ್ಕೆಗಳೂ ಬದಲಾಗಬೇಕು ಎಂಬುದು ಅವರಿಚ್ಛೆ. ಭಾರತದಲ್ಲಿ ಸಂಗೀತಗಾರನಿಗೆ ದೊಡ್ಡ ಅವಕಾಶ ನೀಡುವ, ವೃತ್ತಿ ಜೀವನಕ್ಕೆ ಬೆಂಬಲ ನೀಡುವ ಕ್ಷೇತ್ರ ಎಂದರೆ ಬಾಲಿವುಡ್‌. ಆದರೆ ‘ಇಂಡಿಪೆಂಡೆಂಟ್‌ ಸಂಗೀತ’ಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಹಾಗಿಲ್ಲ. ಸಂಗೀತಗಾರನ ಸಂಗೀತ ಸಾಧನೆಗೇ ಹೆಚ್ಚು ಪ್ರಾಮುಖ್ಯತೆ ಇದೆ ಎನ್ನುತ್ತಾರವರು.ತಮ್ಮ ತಂಡ ‘ಆಯುಷ್ಮಾನ್‌ ಭವ’ದೊಂದಿಗೆ ಬೇರೆ ಬೇರೆ ದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ ಆಯುಷ್ಮಾನ್. ‘ಬಾಲಿವುಡ್‌ ಸಿನಿಮಾ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ಎಂಟು ದೇಶ ಸುತ್ತಿದ್ದೇನೆ. ಅಮೆರಿಕದಲ್ಲಿರುವ ಜನರು ಭಾರತೀಯರಿಗಿಂತ ಹೆಚ್ಚಾಗಿ ಬಾಲಿವುಡ್‌ ಹಾಡುಗಳನ್ನು ಇಷ್ಟಪಡುತ್ತಾರೆ’ ಎಂದಿರುವ ಆಯುಷ್ಮಾನ್‌ ಅವರಿಗೆ ಜನರ ಮುಂದೆ ನಿಂತು ಕಾರ್ಯಕ್ರಮ ನೀಡುವುದರಲ್ಲಿಯೇ ವಿಶೇಷ ಖುಷಿ ಇದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.