ಭಾನುವಾರ, ಜನವರಿ 19, 2020
20 °C

‘ಭಾರತ ಮಧುಮೇಹಿಗಳ ರಾಜಧಾನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತರ ರಾಷ್ಟ್ರಗಳ ಪ್ರಜೆ­ಗಳಿ­ಗಿಂತ ಭಾರತೀಯರು ಸರಾಸರಿ 10 ವರ್ಷ ಮೊದಲು ಮಧುಮೇಹಕ್ಕೆ ತುತ್ತಾ­ಗುತ್ತಾರೆ ಎಂದು ಸುನಯನ ಕಣ್ಣಿನ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಜಾತಾ ಮೂರ್ತಿ ಹೇಳಿದರು.ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆ ನ್ಯಾಷನಲ್ ಕಾಲೇಜಿನ ಎಚ್.­ಎನ್ ಸಭಾಂಗಣ­ದಲ್ಲಿ  ಬುಧ­ವಾರ ಏರ್ಪಡಿಸಿದ್ದ  ಉಪನ್ಯಾಸ ಕಾರ್ಯ­­­ಕ್ರಮದಲ್ಲಿ ಅವರು ಮಾತನಾಡಿದರು.ಭಾರತ ಮಧುಮೇಹಿಗಳ ರಾಜ­ಧಾನಿ­ಯಾಗುತ್ತಿದ್ದು ಅಂಕಿಅಂಶಗಳ ಪ್ರಕಾರ ಭಾರತದಲ್ಲಿ  ಸುಮಾರು 4 ಕೋಟಿ ಮಂದಿ ಮಧುಮೇಹಿಗಳಿದ್ದಾರೆ ಎಂದರು.ಸುನಯನ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ಡಾ.ಕೆ.ವಿ.ನರಸಿಂಹಮೂರ್ತಿ ಮಾತ­ನಾಡಿ, ‘ಆಹಾರ ಮತ್ತು ಉತ್ತಮ ಜೀವನ ಶೈಲಿಯ ಮೂಲಕ ಮಧು­ಮೇಹ­ವನ್ನು ನಿಯಂತ್ರಿಸಬಹುದಾಗಿದೆ. ಅಲೋಪಥಿ  ಔಷಧ ಬಳಕೆ ದೀರ್ಘಾ­­ವಧಿಯಲ್ಲಿ ಕಿಡ್ನಿಯ ತೊಂದ­ರೆಗೆ ಕಾರಣವಾಗುತ್ತದೆ’ ಎಂದರು.ವೇದಿಕೆಯ ಅಧ್ಯಕ್ಷ ನಿವೃತ್ತ ನ್ಯಾಯ­ಮೂರ್ತಿ ಎ.ಜೆ.ಸದಾಶಿವ ಕಾರ್ಯ­ಕ್ರಮ­ದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)