ಗುರುವಾರ , ಮಾರ್ಚ್ 4, 2021
26 °C
ಚಿಕ್ಕಮಗಳೂರಿನಲ್ಲಿ ಮೂಡುಬಿದಿರೆ ಆಳ್ವಾಸ್ ಸಾಂಸ್ಕೃತಿಕ ವೈಭವ

‘ಭಾರತ ಸಾಂಸ್ಕೃತಿಕ ಶ್ರೀಮಂತ ರಾಷ್ಟ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾರತ ಸಾಂಸ್ಕೃತಿಕ ಶ್ರೀಮಂತ ರಾಷ್ಟ್ರ’

ಚಿಕ್ಕಮಗಳೂರು: ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಭಾರತ ಶ್ರೀಮಂತರಾಷ್ಟ್ರ ಎಂದು ಶಾಸಕ ಸಿ.ಟಿ.ರವಿ ಬಣ್ಣಿಸಿದರು. ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಸಂಜೆ ಆಳ್ವಾಸ್ ನುಡಿಸಿರಿ ಚಿಕ್ಕಮಗಳೂರು ಘಟಕ ಹಮ್ಮಿ ಕೊಂಡಿದ್ದ ಮೂಡುಬಿದಿರೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಎಲ್ಲಾ ರೀತಿಯ ಸಾಂಸ್ಕೃತಿಕ ಪುನರು ತ್ಥಾನವನ್ನು  ಆಳ್ವಾಸ್ ಸಾಂಸ್ಕೃತಿಕ ವೈಭವ ದಲ್ಲಿ ಕಾಣಬಹುದಾಗಿದೆ. ಯಾವುದೇ ಪ್ರಶಸ್ತಿಗೆ ಹಾತೊರೆಯದೆ, ಸಾಂಸ್ಕೃತಿಕ ವೈವಿಧ್ಯತೆ ಸಾರುತ್ತಿರುವುದನ್ನು ಗಮನಿಸಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಮೂಡುಬಿದರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಹೆಸರು ಶಿಫಾರಸ್ಸುಗೊಂಡಿದ್ದು, ಇವರು ಕೈಗೊಂಡಿರುವ ಕಾರ್ಯಕ್ಕೆ ಪ್ರಶಸ್ತಿ ಸಂದಾಯವಾಗಲೆಂದು ಹಾರೈಸಿದರು.ಮೂಡುಬಿದರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವಾ ಮಾತನಾಡಿ, ಮೂಡುಬಿದಿರೆಯಲ್ಲಿ ಆಳ್ವಾಸ್ ವಿರಾಸತ್ ಆರಂಭವಾಗಿ 22 ವರ್ಷಗಳಾಗಿದ್ದು, ನುಡಿಸಿರಿ ಘಟಕ ಸ್ಥಾಪನೆಯಾಗಿ 12 ವರ್ಷಗಳಾಗಿವೆ. ಈ ವರ್ಷ ಮೂಡುಬಿದಿರೆಯಲ್ಲಿ ನೀಡಿದ ಕಾರ್ಯಕ್ರಮವನ್ನು 45ಸಾವಿರ ಜನರು ವೀಕ್ಷಿಸಿದ್ದಾರೆ ಎಂದು ನುಡಿದರು.ವಿದ್ಯೆ, ಬುದ್ದಿಗೆ ಕೊಡುವ ಪ್ರಾಶಸ್ತ್ಯವನ್ನು ಮನಸ್ಸು ಕಟ್ಟುವ ಕೆಲಸಕ್ಕೆ ನೀಡಬೇಕು. ಯಾವುದೇ ವ್ಯಕ್ತಿ ಸತ್ಪ್ರಜೆ, ಸಜ್ಜನರಾಗಬೇಕಾದರೆ, ಧಾರ್ಮಿಕತೆಗೆ ಒತ್ತುನೀಡಿ, ಸೌಂದರ್ಯಪ್ರಜ್ಞೆ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ಕನ್ನಡ ಭಾಷೆ, ಕನ್ನಡ ಶಾಲೆಗಳು ಸೊರಗದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಆಳ್ವಾಸ್ ನುಡಿಸಿರಿ ಚಿಕ್ಕಮ ಗಳೂರು ಘಟಕ ಅಧ್ಯಕ್ಷ ಡಾ.ಜೆ.ಪಿ, ಕೃಷ್ಣೇಗೌಡ, ಸಂಚಾಲಕ ದೇವರಾಜಶೆಟ್ಟಿ, ಕಾರ್ಯದರ್ಶಿ ದೀಪಕ್ ದೊಡ್ಡಯ್ಯ, ಸದಸ್ಯ ಪ್ರಸನ್ನಕುಮಾರಶೆಟ್ಟಿ, ಆದಿಚುಂಚ ನಗಿರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ, ನಗರಸಭೆ ಅಧ್ಯಕ್ಷ ಮುತ್ತಯ್ಯ, ಉಪಾಧ್ಯಕ್ಷ ರವಿಕುಮಾರ್ ಇದ್ದರು.ಸಾಂಸ್ಕೃತಿಕ ಪರಂಪರೆ ಇಲ್ಲದ ರಾಷ್ಟ್ರದಲ್ಲಿ ಸೃಜನಶೀಲರು ವಿರಳವಾಗಿ, ಭಯೋತ್ಪಾ ದಕರು ಅಧಿಕಗೊಳ್ಳುವ ಸಾಧ್ಯತೆಗಳಿವೆ.

ಸಿ.ಟಿ.ರವಿ,

ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.