ಶುಕ್ರವಾರ, ಮಾರ್ಚ್ 5, 2021
27 °C

‘ಭಾವಕ್ಕೆ ಚೈತನ್ಯ ತರುವುದು ಮಾತೃಭಾಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾವಕ್ಕೆ ಚೈತನ್ಯ ತರುವುದು ಮಾತೃಭಾಷೆ’

ಗಿರಿಯಾಪುರ (ಕಡೂರು): ಮನಸ್ಸಿಗೆ ಮುದಕೊಡುವ ಮತ್ತು ನಾವು ಅಭಿವ್ಯಕ್ತಿಸುವ ಭಾವನೆಗಳಿಗೆ ಚೈತನ್ಯ ಬರುವುದು ಮಾತೃಭಾಷೆಯ ಬಳಕೆ ಯಿಂದ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ತಿಳಿಸಿದರು. ಕಡೂರು ತಾಲ್ಲೂಕು ಗಿರಿಯಾಪುರದ ಶ್ರೀಗುರು ಕುಮಾರಾಶ್ರಮದಲ್ಲಿ ಹಾನ ಗಲ್‌ ಕುಮಾರಸ್ವಾಮಿಗಳ ಸಂಸ್ಮರ ಣೆಯ 65ನೇ ಶಿವಾನುಭವ ಸಮ್ಮೇಳನ ಉದ್ಘಾಟಿಸಿ ತಮ್ಮ ಆಶೀರ್ವಚನ ನೀಡಿ ಅವರು ಮಾತನಾಡಿದರು.ಮಕ್ಕಳ ಮನದ ಮೇಲೆ ಕೇವಲ ಇಂಗ್ಲಿಷ್‌ ಭಾಷೆಯ ಪ್ರಯೋಗ ಮತ್ತು ಚಿಕ್ಕವರಿದ್ದಾಗಲೇ ಇಂಗ್ಲಿಷ್‌ ಕಲಿಸಬೇಕು ಎಂಬ ಭ್ರಮೆಯಿಂದ ಪೋಷಕರು ಹೊರಬಂದು  ಬದುಕಿನಲ್ಲಿ ಧಾರ್ಮಿಕ ಸಂಸ್ಕೃತಿಯ ಪಾಲಕರು ನಾವಾಗಬೇಕು. ಪ್ರಾಥಮಿಕ ಶಿಕ್ಷಣದ ನಂತರವೂ ಇಂಗ್ಲಿಷ್‌ ಕಲಿಯಲು ಸಾಧ್ಯವಿದೆ ಎಂಬುದನ್ನು ಅರಿತು ಮಕ್ಕಳ ಮೇಲೆ ಬೇರೆ ಸಂಸ್ಕೃತಿ ಹೇರದೆ ಮೌಲ್ಯಯುತ ಬದುಕಿನ ಘನತೆ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ‘ಸಂಕ್ಷಿಪ್ತ ಶಿವ ಪೂಜಾ ವಿಧಿ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು.ಶಿವಸ್ವಾಮಿ, ಧರ್ಮ ಮತ್ತು ಸಾಹಿತ್ಯ ಒಂದೇ ಬಂಡಿಯ ಎರಡು ಚಕ್ರಗಳಂತೆ ಇದ್ದು ಧರ್ಮದ ಹೊರತಾಗಿ ಸಾಹಿತ್ಯವಾಗಲೀ, ಸಾಹಿತ್ಯದ ಹೊರತಾಗಿ ಧರ್ವಾಗಲೀ ಇರುವುದು ಸಾಧ್ಯವಿಲ್ಲ. ಆತ್ಮದಲ್ಲಿ ದೈವ ಸಾಕ್ಷಾತ್ಕಾರದ ಶಿವಪಥದ ಅರಿವಿಗೆ  ಗುರುಪಥ ಅರಿಯಬೇಕಾದ ಅಗತ್ಯವಿದೆ. ವಚನಗಳು ಮೋಕ್ಷ ಮತ್ತು ಗುಣಾತ್ಮಕ ಬದುಕಿನ ಸಾರವಾಗಿವೆ. ಭಾಷೆ ಎನ್ನುವುದು ಅವ್ಯಕ್ತ ಭಾವನೆಗಳನ್ನು ಮತ್ತೊಬ್ಬರಿಗೆ ತಲುಪಿಸುವ ಮಾಧ್ಯಮ ವಾಗಿದ್ದು ಕನ್ನಡ ಭಾಷೆ ಶ್ರೀಮಂತ ಗೊಳಿ ಸುವಲ್ಲಿ ವಚನಗಳ ಪಾತ್ರ ಹಿರಿದಾಗಿದೆ. ಸರ್ಕಾರದ ಆದೇಶಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ, ಬದಲಾಗಿ ಕನ್ನಡ ವನ್ನು ಬಳಸಿ ಬೆಳೆಸುವ ಇಚ್ಛಾಶಕ್ತಿ ನಮಗೆ ಬೇಕು ಎಂದು ನುಡಿದರು.ಜಿಲ್ಲಾ ಶರಣಸಾಹಿತ್ಯ ಪರಿಷತ್‌ ಅಧ್ಯಕ್ಷ ಚಟ್ನಳ್ಳಿಮಹೇಶ್‌ ಮಾತನಾಡಿ, ವಚನ ಕಾರರ ಬದುಕು ಮತ್ತು ಬರಹ ಗಳು ನಮ್ಮ ಬದುಕಿನ ಮತ್ತು ಚಿಂತ ನೆಯ ಸಾರವಾಗಬೇಕು. ಧಾರ್ಮಿಕ ಶ್ರದ್ಧೆ ಯನ್ನು ಶತಮಾನ ಗಳಿಂದ ತಲೆಮಾರು ಗಳಿಗೆ ದಾಟಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು ಭಾರತ ಅನನ್ಯ ಸಂಸ್ಕೃತಿಯ ನಾಡಾಗಿದೆ.ಶರಣರ ಚಿಂತನೆಗಳು ರಾಜಕೀಯ ಸುಧಾರಣೆ, ಸಾಮಾಜಿಕ ಕಳಕಳಿ, ದಾಸೋಹ, ಕಾಯಕನಿಷ್ಠೆ ಮುಂತಾದ ಮಹತ್ತರ ವಿಷಯಗಳನ್ನು ಹೊಂದಿದ್ದು ನಾವು ಅವರ ವಿಚಾರಧಾರೆಗಳ ಮಾರ್ಗದರ್ಶ ನದಲ್ಲಿ ಸಭ್ಯ ನಾಗರಿಕ ಸಮಾಜ ನಿರ್ಮಿ ಸಲು ಮುಂದಾಗಬೇಕು ಎಂದರು. ಮಂಕುತಿಮ್ಮನ ಕಗ್ಗ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿವಮೊಗ್ಗ ಕಸ್ತೂರಬಾ ಕಾಲೇಜು ಉಪನ್ಯಾಸಕ ಜಿ.ಎಸ್‌.ನಟೇಶ್‌, ಪ್ರಕೃತಿಯ ಕರ್ತವ್ಯ ಪ್ರಜ್ಞೆ ನಮ್ಮ ಮಾರ್ಗದರ್ಶಕವಾ ಗಬೇಕು. ಬದುಕಿ ನಲ್ಲಿ ಕೇವಲ ಬಾಹ್ಯ ಚಿಂತನೆಗಳ ಹೊರತಾಗಿ ಅಂತ ರಾತ್ಮನ ಕುರಿತು ಚಿಂತಿಸುವ , ವಿವೇಚನೆ, ವಿವೇಕ ಬಳಸಿ ಬದುಕುವ ಮತ್ತು ಒಳಿತನ್ನೇ ಧ್ಯಾನಿಸುವವರಾಗಬೇಕು ಎಂದರು.ತಾ.ಪಂ ಅಧ್ಯಕ್ಷ ಕುಂಕಾನಾಡು ಬಸವರಾಜ್‌ ಮಾತನಾಡಿದರು. ಕೆ. ಬಿದರೆ ದೊಡ್ಡಮಠದ ಪ್ರಭು ಕುಮಾರ ಶಿವಾಚಾರ್ಯ ಶ್ರೀ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಿರಗುಪ್ಪ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಫಾಲಾಕ್ಷ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕುಮಾರಾಶ್ರಮದ ಕಾರ್ಯಾಧ್ಯಕ್ಷ ಜಿ.ಸಿ.ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಟಿ.ಜಗದೀಶ್‌, ಜಿ.ಎಸ್‌.ಗುರುಶಾಂತಪ್ಪ, ಜಯ ಕುಮಾರ್‌, ಜಿ.ಬಸವರಾಜ್‌ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.