ಬುಧವಾರ, ಜೂನ್ 23, 2021
24 °C

‘ಭ್ರಷ್ಟ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ’ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾ­ವಣೆಯಲ್ಲಿ ಮತದಾರರು ಭ್ರಷ್ಟ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬಾರದು’ ಎಂದು ಸೋಷ­ಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯೂ­ನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ ಕರೆ ನೀಡಿದರು.ಪಟ್ಟಣದ ಎಸ್‌ಯುಸಿಐ ಪಕ್ಷದ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಉತ್ತಮ ನಡತೆ ಹಾಗೂ ಹೋರಾ­ಟದ ಹಾದಿಯಲ್ಲಿ ಸಾಗಿಬಂದ ಅಭ್ಯ­ರ್ಥಿಗೆ ಮತ ಹಾಕಿ. ಅವರು ಸೋಲಲಿ ಗೆಲ್ಲಲಿ, ಇದರಿಂದ ಸಮಾಜದ ಪರಿರ್ವತನೆಯಾಗುತ್ತದೆ’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.’ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ಪಕ್ಷಗಳು ಬಂಡವಾಳ ಶಾಹಿ­ಗಳ ಹಿತಾಸಕ್ತಿ ಕಾಪಾಡುತ್ತಿವೆ. ಇದರಿಂದ ದೇಶದಲ್ಲಿ ಭ್ರಷ್ಟ ಆಡಳಿತ ನಿರ್ಮಾಣವಾಗಿದೆ. ಇದರಿಂದ ದೇಶದಲ್ಲಿ ನಿರೂದ್ಯೋಗ, ಬಡತನ, ಬೆಲೆ ಏರಿಕೆ, ಅನಕ್ಷರತೆ ತಾಂಡವಾಡು­ವದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ನೇರ ಹೊಣೆಯಾಗಿವೆ’ ಎಂದು ಅವರು ಆರೋಪಿಸಿದರು.’ಮೋಸದ ರಾಜಕಾರಣಕ್ಕೆ ಬಲಿಯಾಗದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಮತಕ್ಷೇತ್ರದಿಂದ ಎಸ್‌ಯುಸಿಐ ಅಭ್ಯ­ರ್ಥಿ­ಯಾಗಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಶರ್ಮಾ ಸ್ಪರ್ಧಿಸುತ್ತಿದ್ದಾರೆ. ಅವರ ಪರ ಪ್ರಚಾರ ಮಾಡಬೇಕು’ ಎಂದು ಕಾರ್ಯಕರ್ತರಿಗೆ ದಿವಾಕರ ತಿಳಿಸಿದರು.ಪಕ್ಷದ ಸ್ಥಳೀಯ ಸಮಿತಿ ಕಾರ್ಯ­ದರ್ಶಿ ವೀರಭದ್ರಪ್ಪ ಆರ್.ಕೆ, ಮುಖಂಡ­ರಾದ ಸಿದ್ದರಾಜ ಮಲಕಂಡಿ, ಶರಣು ಹೇರೂರ, ಯೇಸಪ್ಪ ಜಿ.ಕೆ, ವಿಠ್ಠಲ ರಾಠೋಡ, ಮಲ್ಲಿಕಾರ್ಜುನನ ಗಂದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.